ಸಾರಾಂಶ
ಪ್ರವಾಹ ಕುರಿತ ಮಲಯಾಳಿ ಚಲನಚಿತ್ರ 2018 ಆಸ್ಕರ್ ನಾಮನಿರ್ದೇಶನ ಪಟ್ಟಿಯಿಂದ ತಿರಸ್ಕೃತಗೊಂಡಿದೆ
ನವದೆಹಲಿ: ಟೊವಿನೋ ಥಾಮಸ್ ಅವರ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿದ್ದ ಮಲಯಾಳಿ ಚಲನಚಿತ್ರ ‘2018’ ಅಧಿಕೃತವಾಗಿ ಆಸ್ಕರ್ ರೇಸ್‌ನಿಂದ ಹೊರಬಿದ್ದಿದೆ. ಆಸ್ಕರ್ ನಾಮನಿರ್ದೇಶನ ಮಂಡಳಿಯು ಶುಕ್ರವಾರದಂದು 9 ವಿಭಾಗಗಳಲ್ಲಿ 15 ಅತ್ಯುತ್ತಮ ಚಿತ್ರಗಳ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಭಾರತದಿಂದ ಅಧಿಕೃತವಾಗಿ ನಾಮನಿರ್ದೇಶನ ಮಾಡಲಾಗಿದ್ದ ಜೂಡ್ ಆ್ಯಂಟನಿ ಜೊಸೆಫ್ ನಿರ್ದೇಶಿತ ಚಿತ್ರ ಸ್ಥಾನ ಗಿಟ್ಟಿಸಿಲ್ಲ. ಈ ಕುರಿತು ನಿರ್ದೇಶಕ ಜೊಸೆಫ್ ನಿರಾಶೆ ವ್ಯಕ್ತಪಡಿಸಿದ್ದು, ತಮ್ಮ ಅಭಿಮಾನಿಗಳಿಗೆ ನಿರಾಶೆ ಉಂಟುಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. 96ನೇ ಆಸ್ಕರ್ ಪ್ರಶಸ್ತಿ ಪ್ರದಾನವು ಮಾ.10, 2024ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ.