ಸಾರಾಂಶ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಚಿತ್ರದ ರಿಲೀಸ್‌ಗೆ ಕೇವಲ 26 ದಿನಗಳಷ್ಟೇ ಬಾಕಿ ಇವೆ.
ಸಿನಿವಾರ್ತೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಚಿತ್ರದ ರಿಲೀಸ್‌ಗೆ ಕೇವಲ 26 ದಿನಗಳಷ್ಟೇ ಬಾಕಿ ಇವೆ. ಮೇಕಿಂಗ್ ವೀಡಿಯೋ ಹೊರತಾಗಿ ಬೇರೆ ಯಾವ ಕಂಟೆಂಟ್ ಅನ್ನೂ ಹೊರಬಿಡದ ಚಿತ್ರತಂಡ ಇದೀಗ ಹೊಸತೊಂದು ವಿಡಿಯೋ ಬಿಡುಗಡೆ ಮಾಡಿದೆ. ಈ ಮೂಲಕ ಅಧಿಕೃತವಾಗಿ ಪ್ರಚಾರ ಶುರು ಮಾಡಿದೆ.
‘ಅಕ್ಟೋಬರ್ 2ಕ್ಕೆ ಗತಕಾಲದ ಪವಿತ್ರ ಧ್ವನಿಗಳು ಪ್ರಪಂಚದಾದ್ಯಂತ ಪ್ರತಿಧ್ವನಿಸಲಿವೆ’ ಎಂಬ ಆಕರ್ಷಕ ಕ್ಯಾಪ್ಶನ್ ಮೂಲಕ ವೀಡಿಯೋ ಬಿಡುಗಡೆಯಾಗಿದ್ದು, ಶೀಘ್ರ ಸಿನಿಮಾದ ಅಪ್‌ಡೇಟ್ಸ್ ಹೊರಬೀಳಲಿವೆ ಎಂಬ ವಿಚಾರವನ್ನು ಹೊಂಬಾಳೆ ಫಿಲಂಸ್ ತಿಳಿಸಿದೆ.