ಲಕ್ಕಿ ಭಾಸ್ಕರ್‌ ಚಿತ್ರದ ನಿರ್ಮಾಪಕರ ಜತೆಗೆ ರಿಷಬ್‌ ಶೆಟ್ಟಿ ಸಿನಿಮಾ

| N/A | Published : Jul 09 2025, 11:56 AM IST

rishab shetty birthday kantara chapter 1 first poster
ಲಕ್ಕಿ ಭಾಸ್ಕರ್‌ ಚಿತ್ರದ ನಿರ್ಮಾಪಕರ ಜತೆಗೆ ರಿಷಬ್‌ ಶೆಟ್ಟಿ ಸಿನಿಮಾ
Share this Article
  • FB
  • TW
  • Linkdin
  • Email

ಸಾರಾಂಶ

ದುಲ್ಕರ್‌ ಸಲ್ಮಾನ್‌ ನಟನೆಯ ‘ಲಕ್ಕಿ ಭಾಸ್ಕರ್‌’ ಹಾಗೂ ನಾನಿ ಅಭಿನಯದ ‘ಜೆರ್ಸಿ’ ಚಿತ್ರಗಳನ್ನು ನಿರ್ಮಿಸಿದ್ದ ಸಿತಾರಾ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದಲ್ಲಿ ರಿಷಬ್‌ ಶೆಟ್ಟಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.

  ಸಿನಿವಾರ್ತೆ

ರಿಷಬ್‌ ಶೆಟ್ಟಿ ಅವರು ಮತ್ತೊಂದು ದೊಡ್ಡ ತೆಲುಗು ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮಾಡಲಿದ್ದಾರೆ. ಈಗಾಗಲೇ ದುಲ್ಕರ್‌ ಸಲ್ಮಾನ್‌ ನಟನೆಯ ‘ಲಕ್ಕಿ ಭಾಸ್ಕರ್‌’ ಹಾಗೂ ನಾನಿ ಅಭಿನಯದ ‘ಜೆರ್ಸಿ’ ಚಿತ್ರಗಳನ್ನು ನಿರ್ಮಿಸಿದ್ದ ಸಿತಾರಾ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದಲ್ಲಿ ರಿಷಬ್‌ ಶೆಟ್ಟಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.

 ಇದೂ ಕೂಡ ಪ್ಯಾನ್‌ ಇಂಡಿಯಾ ಸಿನಿಮಾ ಆಗಿದ್ದು, ಐದು ಭಾಷೆಗಳಲ್ಲಿ ಮೂಡಿ ಬರಲಿದೆ ಎಂಬುದು ಸದ್ಯದ ಸುದ್ದಿ.

ಆದರೆ, ಈ ಚಿತ್ರ ಯಾವಾಗ ಸೆಟ್ಟೇರುತ್ತದೆ, ನಿರ್ದೇಶಕರು ಯಾರು ಎನ್ನುವ ಮಾಹಿತಿ ಇಲ್ಲ. ಸದ್ಯಕ್ಕೆ ‘ಜೈ ಹನುಮಾನ್‌’ ಹಾಗೂ ‘ಛತ್ರಪತಿ ಶಿವಾಜಿ’ ಚಿತ್ರಗಳು ರಿಷಬ್‌ ಶೆಟ್ಟಿ ಅವರ ಮುಂದಿವೆ. ‘ಜೈ ಹನುಮಾನ್‌’ ಚಿತ್ರದ ನಿರ್ದೇಶಕ ಪ್ರಶಾಂತ್‌ ವರ್ಮಾ ಬೇರೆ ಚಿತ್ರದಲ್ಲಿ ತೊಡಗಿಸಿಕೊಂಡಿರುವುದರಿಂದ ರಿಷಬ್‌ ಶೆಟ್ಟಿ ಅವರು ಸಿತಾರಾ ಎಂಟರ್‌ಟೇನ್‌ಮೆಂಟ್‌ ನಿರ್ಮಾಣ ಸಂಸ್ಥೆ ಜತೆಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.

Read more Articles on