ದಿನ 1 ಬಾಟಲಿ ಜಾನ್ಸನ್ಸ್‌ ಬೇಬಿ ಪೌಡರ್‌ ತಿನ್ನುತ್ತಾಳಂತೆ ಈಕೆ!

| Published : Dec 08 2023, 01:45 AM IST

ಸಾರಾಂಶ

ಅಮೆರಿಕದ 27 ವರ್ಷದ ಮಹಿಳೆ ಡ್ರೆಕಾ ಮಾರ್ಟಿನ್‌ ಅವರು ಪ್ರತಿ ದಿನ ತಾನು ಒಂದು ಪೂರ್ತಿ ಬಾಟಲಿ ಜಾನ್ಸನ್ಸ್ ಬೇಬಿ ಪೌಡರ್‌ ಅನ್ನು ತಿಂದು ಖಾಲಿ ಮಾಡುತ್ತಾಳಂತೆ.

ಏನು ಪೌಡರ್‌ ತಿಂತಾರಾ? ಹೌದು ಸ್ವಾಮಿ. ಅಮೆರಿಕದ 27 ವರ್ಷದ ಮಹಿಳೆ ಡ್ರೆಕಾ ಮಾರ್ಟಿನ್‌ ಅವರು ಪ್ರತಿ ದಿನ ತಾನು ಒಂದು ಪೂರ್ತಿ ಬಾಟಲಿ ಜಾನ್ಸನ್ಸ್ ಬೇಬಿ ಪೌಡರ್‌ ಅನ್ನು ತಿಂದು ಖಾಲಿ ಮಾಡುತ್ತಾಳಂತೆ. ಈ ಪೌಡರ್‌ ತನಗೆ ಭಾರೀ ಇಷ್ಟ ಎಂದು ಸ್ವತಃ ಆಕೆಯೇ ಈ ಬಗ್ಗೆ ಹೇಳಿಕೊಂಡಿದ್ದಾಳೆ. ಅಲ್ಲದೇ ಈ ವರ್ಷ ಬರೋಬ್ಬರಿ 3.3 ಲಕ್ಷ ರು. ಗಳನ್ನು ಕೇವಲ ತಾನು ಇಷ್ಟಪಟ್ಟು ತಿನ್ನುವ ಜಾನ್ಸನ್ಸ್ ಬೇಬಿ ಪೌಡರ್‌ ಖರೀದಿಗೆಂದೇ ವ್ಯಯಿಸಿದ್ದಾಳೆ. ಪೌಡರ್‌ ಬಾಯಲ್ಲಿ ಕರಗುತ್ತದೆ ನನಗೆ ಅದನ್ನು ತಿನ್ನುವುದು ಇಷ್ಟ ಮತ್ತು ನಾನು ಅದನ್ನು ಬಿಡುವುದಿಲ್ಲ ಎಂದು ಆಕೆ ಹೇಳಿದ್ದಾಳೆ. ಅಲ್ಲದೇ ಆಕೆಗೆ ಸೀಮೆಎಣ್ಣೆ ಅಥವಾ ಪೇಂಟ್‌ನಂತಹ ವಸ್ತು ತಿನ್ನಬೇಕೆನ್ನಿಸುವ ಪಿಕಾ ಎಂಬ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದಾಳೆ.