ಬಿಗ್‌ಬಾಸ್ ಸ್ಪರ್ಧಿ ತನಿಶಾ ವಿರುದ್ಧ ಕ್ರಮಕ್ಕೆ ಆಗ್ರಹ

| Published : Nov 21 2023, 12:45 AM IST

ಬಿಗ್‌ಬಾಸ್ ಸ್ಪರ್ಧಿ ತನಿಶಾ ವಿರುದ್ಧ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬಿಗ್ ಬಾಸ್ ಶೋನಲ್ಲಿ ತನಿಶಾ ಅವರು ಡ್ರೋನ್ ಪ್ರತಾಪ ಎಂಬ ಪ್ರತಿಸ್ಪರ್ಧಿ ಜೊತೆಗೆ ನಡೆಯುವ ಸಂಭಾಷಣೆಯಲ್ಲಿ ವಡ್ಡರ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿ, ವಡ್ಡನೋ ನೀನು ದಡ್ಡನೋ ಎಂಬ ಪದ ಬಳಸಿರುವುದು ರಾಜ್ಯದ ಎಲ್ಲ ಭೋವಿ ಸಮುದಾಯದ ಜನಾಂಗವನ್ನು ಅವಮಾನಕ್ಕೆ ಕಾರಣವಾಗಿದೆ

ಬೆಳಗಾವಿ: ಬಿಗ್ ಬಾಸ್ ಸ್ಪರ್ಧಿ ತನಿಶಾ ಅವರು ಭೋವಿ ಸಮಾಜದ ಕುರಿತು ನೀಡಿದ ಅವಹೇಳನಕಾರಿ ಹೇಳಿಕೆಗೆ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಪ್ರಸ್ತುತವಾಗಿ ಬಿಗ್ ಬಾಸ್ ಶೋನಲ್ಲಿ ತನಿಶಾ ಅವರು ಡ್ರೋನ್ ಪ್ರತಾಪ ಎಂಬ ಪ್ರತಿಸ್ಪರ್ಧಿ ಜೊತೆಗೆ ನಡೆಯುವ ಸಂಭಾಷಣೆಯಲ್ಲಿ ವಡ್ಡರ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿ, ವಡ್ಡನೋ ನೀನು ದಡ್ಡನೋ ಎಂಬ ಪದ ಬಳಸಿರುವುದು ರಾಜ್ಯದ ಎಲ್ಲ ಭೋವಿ ಸಮುದಾಯದ ಜನಾಂಗವನ್ನು ಅವಮಾನಕ್ಕೆ ಕಾರಣವಾಗಿದೆ. ಆದ್ದರಿಂದ ತನಿಶಾ ಅವರನ್ನು ಕೂಡಲೇ ಬಿಗ್‌ಬಾಸ್ ಮನೆಯಿಂದ ಹೊರಗೆ ಹಾಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಗುಂಡು ಬಡಸ್ಕರ, ಸಂತೋಣ ಪಾತರೋಟ, ಪರಶು ಗಾಂಡಿವಡ್ಡರ, ರವಿ ಸಾಂಗವಕರ, ಕುಮಾರ ಗಾಂಡಿವಡ್ಡರ, ಗಂಗಾರಾಮ ಗಾಂಡಿವಡ್ಡರ, ರಾಹುಲ ಕಾಗಲಕರ ಸೇರಿದಂತೆ ಇತರರಿದ್ದರು.