ಸಾರಾಂಶ
ಸ್ಯಾಂಡಲ್‌ವುಡ್‌ನ ಬ್ಯಾಚುಲರ್ ಆಕ್ಟರ್ ಡಾಲಿ ಧನಂಜಯ ಅವರು ಕೊನೆಗೂ ಮದುವೆ ಆಗುತ್ತಿದ್ದಾರೆ. ಅವರ ಲವ್ ಮ್ಯಾರೇಜ್ ಕತೆ ಇಲ್ಲಿದೆ.
ಧನಂಜಯ ಯಾವಾಗ ಮದುವೆ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡಾಲಿ ಧನಂಜಯ ಅವರಿಗೆ ಹುಡುಗಿ ಸಿಕ್ಕಿದ್ದಾರೆ. ಆ ಹುಡುಗಿಯ ಹೆಸರು ಡಾ. ಧನ್ಯತಾ.
ವೈದ್ಯೆ ಧನ್ಯತಾ ಚಿತ್ರದುರ್ಗದವರು. ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದ ಧನಂಜಯ ಹಾಗೂ ಡಾಕ್ಟರ್ ಧನ್ಯತಾ ಅವರ ನಡುವೆ ಇತ್ತೀಚೆಗೆ ಪ್ರೀತಿ ಹುಟ್ಟಿಕೊಂಡಿದೆ. ಇಬ್ಬರ ಪ್ರೇಮ ಕತೆಗೆ ಪೋಷಕರು ಕೂಡ ಒಪ್ಪಿಗೆ ಕೊಟ್ಟಿದ್ದು, ಫೆಬ್ರವರಿ ತಿಂಗಳಲ್ಲಿ ಮದುವೆ ಆಗಲಿದ್ದಾರೆ. ಆ ಮೂಲಕ ಆಕ್ಟರ್, ಡಾಕ್ಟರ್ ಕೈ ಹಿಡಿಯುತ್ತಿದ್ದಾರೆ.ಧನಂಜಯ ಅವರನ್ನು ಕೈ ಹಿಡಿಯುತ್ತಿರುವ ಧನ್ಯತಾ ಅವರು ಗೈನಕಾಲಜಿಸ್ಟ್ ಆಗಿದ್ದಾರೆ. ಇಬ್ಬರು ಜತೆಗೂಡಿ ವಿಶೇಷವಾಗಿ ಫೋಟೋಶೂಟ್ ಕೂಡ ಮಾಡಿಕೊಂಡಿದ್ದಾರೆ.