ಸಾರಾಂಶ
ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ನಟಿ ಭಾವನಾ ಅವರು ಸೀಮಂತ ಶಾಸ್ತ್ರ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೊಮ್ಮಘಟ್ಟದಲ್ಲಿರುವ ನಿವಾಸದಲ್ಲಿ ಸೀಮಂತ ಶಾಸ್ತ್ರ ನಡೆಯಿತು.
ಬೆಂಗಳೂರು : ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ನಟಿ ಭಾವನಾ ಅವರು ಸೀಮಂತ ಶಾಸ್ತ್ರ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೊಮ್ಮಘಟ್ಟದಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಈ ಸೀಮಂತ ಶಾಸ್ತ್ರಕ್ಕೆ ಕುಟುಂಬದವರು ಮತ್ತು ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು.
ಸರಳವಾಗಿ ನಡೆದ ಈ ಸೀಮಂತದಲ್ಲಿ ಸಂಪ್ರದಾಯದಂತೆ ಮತ್ತೈದೆಯರು ಭಾವನಾಗೆ ಮಡಿಲು ತುಂಬುವ ಶಾಸ್ತ್ರ ಮಾಡಿ ಸಿಹಿ ತಿನ್ನಿಸಿದರು
. ಹಳದಿ ಮಿಶ್ರಿತ ಹೂವುಗಳಿಂದ ಅಲಂಕಾರ ಮಾಡಿದ್ದ ಜಾಗದಲ್ಲಿ ಕೂತು ಭಾವನಾ ಅವರು ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಏಳು ತಿಂಗಳ ಗರ್ಭಿಣಿಯಾಗಿರುವ ಭಾವನಾ ಅವರು ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಭಾವನಾ ಅವರು ಮದುವೆಯಾಗದೆ ಐವಿಎಫ್ ಮೂಲಕ ತಾಯಿಯಾಗುತ್ತಿದ್ದಾರೆ.