ಅವಳಿ ಮಕ್ಕಳ ಅಮ್ಮನಾಗುತ್ತಿರುವ ಭಾವನಾ ರಾಮಣ್ಣ

| N/A | Published : Jul 05 2025, 11:42 AM IST

 Bhavana Ramanna

ಸಾರಾಂಶ

‘ನಾನೀಗ ಆರು ತಿಂಗಳ ಗರ್ಭವತಿ. ಅವಳಿ ಮಕ್ಕಳಿಗೆ ಅಮ್ಮನಾಗುವ ಖುಷಿಯಲ್ಲಿದ್ದೇನೆ. ನಾನು ಅವಿವಾಹಿತೆ, ಹೀಗಾಗಿ ಐವಿಎಫ್‌ ಮೂಲಕ ತಾಯಿಯಾಗುತ್ತಿದ್ದೇನೆ.’

- ಇದು ನಟಿ ಭಾವನಾ ರಾಮಣ್ಣ ಅವರ ಮಾತುಗಳು

 ಸಿನಿವಾರ್ತೆ

‘ನಾನೀಗ ಆರು ತಿಂಗಳ ಗರ್ಭವತಿ. ಅವಳಿ ಮಕ್ಕಳಿಗೆ ಅಮ್ಮನಾಗುವ ಖುಷಿಯಲ್ಲಿದ್ದೇನೆ. ನಾನು ಅವಿವಾಹಿತೆ, ಹೀಗಾಗಿ ಐವಿಎಫ್‌ ಮೂಲಕ ತಾಯಿಯಾಗುತ್ತಿದ್ದೇನೆ.’

- ಇದು ನಟಿ ಭಾವನಾ ರಾಮಣ್ಣ ಅವರ ಮಾತುಗಳು. ‘ಚಂದ್ರಮುಖಿ ಪ್ರಾಣಸಖಿ’ ಸಿನಿಮಾ ಮೂಲಕ ಮನೆಮಾತಾದ ನಟಿ 40ರ ಹರೆಯದಲ್ಲಿ ಅವಳಿ ಮಕ್ಕಳ ತಾಯಿಯಾಗುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ‘ನನಗೆ 20, 30ರ ಹರೆಯದಲ್ಲಿ ತಾಯ್ತನದ ಬಗ್ಗೆ ಯೋಚನೆ ಇರಲಿಲ್ಲ. ಆದರೆ 40ರ ಹರೆಯಕ್ಕೆ ಬಂದಾಗ ತಾಯಿಯಾಗುವ ತುಡಿತ ಹೆಚ್ಚಾಯಿತು. ಆದರೆ ನಾನು ಅವಿವಾಹಿತೆ. ತಾಯಿಯಾಗುವುದು ಸುಲಭವಲ್ಲ. ಹಲವು ಐವಿಎಫ್‌ ಕ್ಲಿನಿಕ್‌ಗಳು ನನ್ನ ಆಸೆಗೆ ತಣ್ಣೀರೆರಚಿದವು. ಕೊನೆಗೂ ಒಂದು ಕಡೆ ಐವಿಎಫ್‌ ಮಾಡಲು ಒಪ್ಪಿದರು. ಮೊದಲ ಪ್ರಯತ್ನದಲ್ಲೇ ಗರ್ಭವತಿಯಾದೆ. ಈ ನನ್ನ ನಿರ್ಧಾರಕ್ಕೆ ತಂದೆ, ಮನೆಮಂದಿಯ ಬೆಂಬಲವಿದೆ. ಕೆಲವರು ನನ್ನ ಈ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ನಾನು ಸತ್ಯದ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂಬುದು ನನಗೆ ತಿಳಿದಿದೆ. ನನ್ನ ಮಕ್ಕಳು ತಂದೆ ಇಲ್ಲದೇ ಬೆಳೆಯುತ್ತಾರೆ. ಆದರೆ ಕಲೆ, ಸಂಗೀತ, ಸಂಸ್ಕೃತಿ, ಪ್ರೀತಿ ತುಂಬಿದ ವಾತಾವರಣದಲ್ಲಿ ಬೆಳೆಯುತ್ತಾರೆ. ಅವರು ಹೆಮ್ಮೆ ಪಡುವಂತೆ ಬೆಳೆಸುತ್ತೇನೆ. ಎರಡು ಪ್ರೀತಿ ತುಂಬಿದ ಜೀವಗಳು ಅಮ್ಮಾ ಎಂದು ಕರೆಯುವುದರಲ್ಲಿ ಎಲ್ಲವೂ ಇದೆ ಎಂದು ನಂಬಿದ್ದೇನೆ’ ಎಂದು ಭಾವನಾ ಭಾವುಕ ನುಡಿಗಳನ್ನಾಡಿದ್ದಾರೆ.

Read more Articles on