ಸಾರಾಂಶ
ಸಿನಿವಾರ್ತೆ
ಕನ್ನಡದ ಹುಡುಗಿ ಶ್ರೀಲೀಲಾ ಇದೀಗ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಬಾಲಿವುಡ್ ಸಿನಿಮಾ ‘ಆಶಿಕಿ 3’ಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಅನುರಾಗ್ ಬಸು ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದೀಗ ಕಾರ್ತಿಕ್ ಹಾಗೂ ಶ್ರೀಲೀಲಾ ಡೇಟಿಂಗ್ ವಿಚಾರ ಬಿಟೌನ್‌ನಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೆ ಪೂರಕವಾಗಿ ಕಾರ್ತಿಕ್ ತಾಯಿ ಮಾಲಾ ತಿವಾರಿ ಅವಾರ್ಡ್ ಫಂಕ್ಷನ್ ಒಂದರಲ್ಲಿ ಮಾತನಾಡಿದ್ದಾರೆ. ಇಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರಣ್ ಜೋಹರ್, ‘ನಿಮ್ಮ ಸೊಸೆ ಹೇಗಿರಬೇಕು?’ ಎಂದು ಮಾಲಾ ಅವರನ್ನು ಪ್ರಶ್ನಿಸಿದಾಗ, ಅವರು ‘ನನ್ನ ಸೊಸೆ ಡಾಕ್ಟರ್ ಆಗಿರಬೇಕು’ ಎಂದಿದ್ದಾರೆ.
ನಟಿ ಶ್ರೀಲೀಲಾ ಎಂಬಿಬಿಎಸ್ ಪದವೀಧರೆ. ಕಾರ್ತಿಕ್ ಜೊತೆ ಸಾಕಷ್ಟು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಈ ನಟಿ ಅವರ ಮನೆಯಲ್ಲಿ ಪಾರ್ಟಿಯಲ್ಲೂ ಭಾಗಿಯಾಗಿದ್ದರು. ಇದೀಗ ಕಾರ್ತಿಕ್ ತಾಯಿಯೂ ಡಾಕ್ಟರ್ ಹುಡುಗಿಯನ್ನೇ ಸೊಸೆ ಮಾಡಿಕೊಳ್ಳುತ್ತೇನೆ ಎಂದಿರುವುದು ಇವರಿಬ್ಬರ ರಿಲೇಶನ್‌ಶಿಪ್ ಕುರಿತ ಅನುಮಾನ ದೃಢಪಡಿಸಿದಂತಾಗಿದೆ.