ನಟಿ ಶ್ರುತಿ ತಮ್ಮ 49 ನೇ ಹುಟ್ಟುಹಬ್ಬ : ದುಬೈಲ್ಲಿ ಸ್ಕೈಡೈವಿಂಗ್ ಮಾಡುವ ಮೂಲಕ ತಮ್ಮ ಬಕೆಟ್ ಲಿಸ್ಟ್ ನಲ್ಲಿರುವ ಆಸೆಯನ್ನು ಪೂರೈಕೆ

| Published : Oct 04 2024, 01:04 AM IST / Updated: Oct 04 2024, 04:26 AM IST

ನಟಿ ಶ್ರುತಿ ತಮ್ಮ 49 ನೇ ಹುಟ್ಟುಹಬ್ಬ : ದುಬೈಲ್ಲಿ ಸ್ಕೈಡೈವಿಂಗ್ ಮಾಡುವ ಮೂಲಕ ತಮ್ಮ ಬಕೆಟ್ ಲಿಸ್ಟ್ ನಲ್ಲಿರುವ ಆಸೆಯನ್ನು ಪೂರೈಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಟಿ ಶ್ರುತಿ ತಮ್ಮ 49 ನೇ ಹುಟ್ಟುಹಬ್ಬದಂದು ದುಬೈಯಲ್ಲಿ ಸ್ಕೈಡೈವಿಂಗ್ ಮಾಡುವ ಮೂಲಕ ತಮ್ಮ ಬಕೆಟ್ ಲಿಸ್ಟ್ ನಲ್ಲಿರುವ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಈ ಮೂಲಕ ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸಾಬೀತುಪಡಿಸಿದ್ದಾರೆ.

 ಸಿನಿವಾರ್ತೆ

ಪ್ರತಿಯೊಬ್ಬರಿಗೂ ಆಸೆಗಳ ಬಕೆಟ್‌ ಲಿಸ್ಟ್‌ ಇರುತ್ತದೆ. ಯಾವ ವಯಸ್ಸಿನಲ್ಲಾದರೂ ಆ ಆಸೆಯ ಬಕೆಟ್‌ ಲಿಸ್ಟ್‌ ಅನ್ನು ಪೂರೈಸಿಕೊಳ್ಳಬಹುದು ಅನ್ನುವುದಕ್ಕೆ ಶ್ರುತಿ ಸ್ಫೂರ್ತಿಯಾಗಿದ್ದಾರೆ. ಇತ್ತೀಚೆಗೆ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟಿ ದುಬೈಯಲ್ಲಿ ತನ್ನ ಬಹುದಿನಗಳ ಆಸೆಯಾದ ಸ್ಕೈಡೈವಿಂಗ್‌ ಮಾಡಿ ಆಸೆ ತೀರಿಸಿಕೊಂಡಿದ್ದಾರೆ. 

ಆ ಮೂಲಕ ಉಳಿದವರಿಗೂ ಪ್ರೇರಣೆಯಾಗಿದ್ದಾರೆ. ‘ಸ್ಕೈ ಡೈವಿಂಗ್‌ ಮಾಡಲು ವಿಮಾನದಿಂದ ಜಿಗಿಯುವ ಕ್ಷಣ ಬಂದಾಗ ಇನ್ನಿಲ್ಲದಂತೆ ಭಯ ನನ್ನನ್ನು ಆವರಿಸಿಕೊಂಡಿತು. ಇನ್ನೇನು ಜಂಪ್‌ ಮಾಡಬೇಕು ಎಂದಾಗ ಆ ಕ್ಷಣ ನನ್ನ ಸುತ್ತುವರಿದ ಭಯವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಜಿಗಿದ ಮೇಲೆ ಪ್ಯಾರಾಚೂಟ್‌ ತೆಗೆದ ಆ 30 ಸೆಕೆಂಡುಗಳೇ ನನಗೆ ಶಾಶ್ವತ ಅಂತ ಅನಿಸಿಬಿಟ್ಟಿತು’ ಎಂದಿದ್ದಾರೆ ನಟಿ ಶ್ರುತಿ.