‘ಸುದೀಪ್ ಅವರ ಮಾರ್ಕ್ ಚಿತ್ರದ ರಿಜೆಲ್ಟ್ ನೋಡುತ್ತಿದ್ದರೆ ನನಗೆ ಕನ್ನಡದಲ್ಲಿ ಹೆಚ್ಚಿನ ಅವಕಾಶಗಳು ಬರುತ್ತವೆಂಬ ನೀರಿಕ್ಷೆಯಂತೂ ಇದೆ’.- ಹೀಗೆ ಹೇಳಿದ್ದು ನಟ ನವೀನ್ ಚಂದ್ರ. ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಬೇಡಿಕೆಯ ನಟ ಎನಿಸಿಕೊಂಡಿರುವ ನವೀನ್ ಚಂದ್ರ
ಸಿನಿವಾರ್ತೆ
‘ಸುದೀಪ್ ಅವರ ಮಾರ್ಕ್ ಚಿತ್ರದ ರಿಜೆಲ್ಟ್ ನೋಡುತ್ತಿದ್ದರೆ ನನಗೆ ಕನ್ನಡದಲ್ಲಿ ಹೆಚ್ಚಿನ ಅವಕಾಶಗಳು ಬರುತ್ತವೆಂಬ ನೀರಿಕ್ಷೆಯಂತೂ ಇದೆ’.- ಹೀಗೆ ಹೇಳಿದ್ದು ನಟ ನವೀನ್ ಚಂದ್ರ. ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಬೇಡಿಕೆಯ ನಟ ಎನಿಸಿಕೊಂಡಿರುವ ನವೀನ್ ಚಂದ್ರ, ‘ಮಾರ್ಕ್’ ಮೂಲಕ ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ. ‘ಮಾರ್ಕ್’ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ನವೀನ್ ಅವರು ಹೇಳಿದ ಮಾತುಗಳು ಇಲ್ಲಿವೆ.
‘ಮಾರ್ಕ್’ ಚಿತ್ರದ ಸಂಭ್ರಮವನ್ನು ಎಂಜಾಯ್ ಮಾಡುತ್ತಿದ್ದೇನೆ
1. ನಾನು ಮೊದಲ ಬಾರಿಗೆ ನಟಿಸಿದ ‘ಮಾರ್ಕ್’ ಚಿತ್ರದ ಸಂಭ್ರಮವನ್ನು ಎಂಜಾಯ್ ಮಾಡುತ್ತಿದ್ದೇನೆ. ಒಂದು ದೊಡ್ಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದೇನೆಂಬ ಖುಷಿ ಆಗುತ್ತದೆ.2. ಸುದೀಪ್ ಅವರ ವ್ಯಕ್ತಿತ್ವವೇ ನನಗೆ ಇಷ್ಟ. ನಾನು ಅವರನ್ನು ನೋಡಿದ್ದಂತೆ ಯಾರನ್ನೂ ಅವರು ಕಾಯಿಸಲ್ಲ. ಸಮಯಕ್ಕೆ ಮತ್ತು ವ್ಯಕ್ತಿತ್ವಗಳಿಗೆ ಅವರು ಅಷ್ಟು ಮಹತ್ವ ಕೊಡುತ್ತಾರೆ. ಇದು ಅವರ ದೊಡ್ಡ ಗುಣ.
3. ನಾನು ತೆಲುಗು, ತಮಿಳು ಚಿತ್ರಗಳಲ್ಲೇ ಹೆಚ್ಚು ನಟಿಸುತ್ತಿರಬಹುದು. ಆದರೆ, ನಾನು ಕನ್ನಡದವನು. ನಮ್ಮ ಊರು ಬಳ್ಳಾರಿ. ಈಗಲೂ ಬಳ್ಳಾರಿ ಜತೆಗೆ ನಂಟು ಇದೆ. ನಾನು ಓದಿದ್ದು ಕೂಡ ಕನ್ನಡದಲ್ಲೇ.4. ನಟನಾಗಬೇಕು ಎಂದಾಗ ನನಗೆ ಮೊದಲು ಅವಕಾಶ ಸಿಕ್ಕಿದ್ದು ತೆಲುಗಿನಲ್ಲಿ. ‘ಅಂದಾಲ ರಾಕ್ಷಸಿ’, ‘ಎವರು’, ‘ಮಿಲೋ ಎವರು ಕೋಟೀಶ್ವರಡು’, ‘ಅರವಿಂದ್ ಸಮೇತ ವೀರ ರಾಘವ’, ‘ಮಾಸ್ ಜಾತರ’, ‘ನೇನು ಲೋಕಲ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದು, ಎಲ್ಲಾ ಚಿತ್ರಗಳು ನನಗೆ ಹೆಸರು ತಂದುಕೊಟ್ಟಿವೆ.
ಹೀರೋ ಆಗಿಯೇ ಕಾಣಿಸಿಕೊಳ್ಳಬೇಕು ಎನ್ನುವ ಷರತ್ತು ಇಲ್ಲ
5. ನಾನು ಕಲಾವಿದ, ಹೀರೋ. ಆದರೆ, ಹೀರೋ ಆಗಿಯೇ ಕಾಣಿಸಿಕೊಳ್ಳಬೇಕು ಎನ್ನುವ ಷರತ್ತು ಇಲ್ಲ. ನಿರ್ದೇಶಕನ ಕಲ್ಪನೆಯ ಹಾಗೂ ಸೃಷ್ಟಿಯ ಪಾತ್ರಕ್ಕೆ ನಾನು ಜೀವ ತುಂಬಬೇಕು. ಅದೇ ಯೋಚನೆಯಲ್ಲಿ ಇಲ್ಲಿವರೆಗೂ ಸಿನಿಮಾಗಳಲ್ಲಿ ನಟಿಸಿಕೊಂಡು ಬಂದಿದ್ದೇನೆ.6. ನನ್ನ ಪಾತ್ರ ಹಾಗೂ ಸುದೀಪ್ ಅವರಿಂದ ನಾನು ‘ಮಾರ್ಕ್’ ಚಿತ್ರ ಒಪ್ಪಿಕೊಂಡೆ. ಒಳ್ಳೆಯ ಕಂಟೆಂಟ್ ಇರುವ ಸಿನಿಮಾ. ‘ಮಾರ್ಕ್’ ಚಿತ್ರದ ಗೆಲುವು, ಸಂಭ್ರಮ ನೋಡುತ್ತಿದ್ದೇನೆ. ಚಿತ್ರದ ಈ ರಿಜೆಲ್ಟ್ ನನಗೆ ನನ್ನ ಕನ್ನಡ ಭಾಷೆಯಲ್ಲಿ ಮತ್ತಷ್ಟು ಅವಕಾಶಗಳು ಬರುತ್ತವೆ ಎನ್ನುವ ನಂಬಿಕೆಯಲ್ಲಿದ್ದೇನೆ.
7. ನಟನಾಗಿ ಹೇಳುವುದಾದರೆ ನನಗೆ ತೆಲುಗು, ತಮಿಳು, ಕನ್ನಡ... ಭಾಷೆಗಳ ನಡುವೆ ವ್ಯತ್ಯಾಸ ಇಲ್ಲ ಅನಿಸುತ್ತದೆ. ಸಿನಿಮಾ ಅಂದ್ರೆ ಸಿನಿಮಾ ಅಷ್ಟೆ. ಅದಕ್ಕೆ ಭಾಷೆಯ ಬೇಲಿ ಇಲ್ಲ. ಎಲ್ಲಿ ಒಳ್ಳೆಯ ಚಿತ್ರಗಳು ಇರುತ್ತವೋ ಅಲ್ಲಿ ಪ್ರೇಕ್ಷಕರು ಇರುತ್ತಾರೆ ಎಂಬುದು ನನ್ನ ನಿಲುವು.


