ಆದಿತ್ಯ ನಟನೆಯ ಕಾಂಗರೂ ಶೂಟಿಂಗ್‌ ಪೂರ್ಣ

| Published : Jan 17 2024, 01:46 AM IST

ಸಾರಾಂಶ

ಆದಿತ್ಯ ನಟನೆಯ ಚಿತ್ರ ಕಾಂಗರೂ ಚಿತ್ರದ ಶೂಟಿಂಗ್ ಪೂರ್ಣ

ಕನ್ನಡಪ್ರಭ ಸಿನಿವಾರ್ತೆಆದಿತ್ಯ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ಕಾಂಗರೂ’ ಶೂಟಿಂಗ್‌, ಡಬ್ಬಿಂಗ್ ಮುಕ್ತಾಯವಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಸಸ್ಪೆನ್ಸ್‌ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕಿಶೋರ್ ಮೇಗಳಮನೆ ನಿರ್ದೇಶಕರು. ಆದಿತ್ಯ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಂಜನಿ ರಾಘವನ್ ಮನೋವೈದ್ಯೆಯ ಪಾತ್ರ ನಿರ್ವಹಿಸಿದ್ದಾರೆ. ಶಿವಮಣಿ, ಕರಿಸುಬ್ಬು, ನಾಗೇಂದ್ರ ಅರಸ್ ನಟಿಸಿದ್ದಾರೆ. ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ರಾಮಚಂದ್ರಯ್ಯ ನಿರ್ಮಾಪಕರು.