ಸಾರಾಂಶ
ನಟಿ ಐಶಾನಿ ಶೆಟ್ಟಿ ಅವರು ತಮ್ಮ ಮೊದಲ ನಿರ್ದೇಶನದ ಚಿತ್ರವನ್ನು ಆರಂಭಿಸಿದ್ದು, ಈ ಚಿತ್ರದ ಮೂಲಕ ತಾನೇ ನಿರ್ಮಾಪಕಿ ಕೂಡ ಆಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಕುಂತಲೆ ಸಿನಿಮಾಸ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ.
ಸಿನಿವಾರ್ತೆ
ನಟಿ ಐಶಾನಿ ಶೆಟ್ಟಿ ಅವರು ತಮ್ಮ ಮೊದಲ ನಿರ್ದೇಶನದ ಚಿತ್ರವನ್ನು ಆರಂಭಿಸಿದ್ದು, ಈ ಚಿತ್ರದ ಮೂಲಕ ತಾನೇ ನಿರ್ಮಾಪಕಿ ಕೂಡ ಆಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಕುಂತಲೆ ಸಿನಿಮಾಸ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ.
ಈ ಕುರಿತು ಐಶಾನಿ ಶೆಟ್ಟಿ, ‘ನನ್ನ ಜೀವನದಲ್ಲಿ ಸಿನಿಮಾ ನನಗೆ ವಿಶೇಷವಾದ ಸ್ಥಾನ ಹಾಗೂ ಗೌರವ ನೀಡಿದೆ. ಕತೆ ಹೇಳುವುದು ನನ್ನ ಆಸಕ್ತಿಯೂ ಕೂಡ. ಹೀಗಾಗಿ ನಾನೇ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕಿಯಾದೆ. ನಿರ್ದೇಶಕಿ ಆಗಿ ಪ್ರಯಾಣ ಶುರು ಮಾಡಿದ ಮೇಲೆ ಈ ಚಿತ್ರವನ್ನು ನಾನೇ ನಿರ್ಮಿಸಬೇಕೆಂಬ ಯೋಚನೆ ಬಂತು. ಹೀಗಾಗಿ ಶಾಕುಂತಲೆ ಸಿನಿಮಾಸ್ ಹೆಸರಿನ ಬ್ಯಾನರ್ ಆರಂಭಿಸಿದೆ. ಶಾಕುಂತಲೆ ಸಿಕ್ಕಳು ಹಾಡಿನ ಮೂಲಕ ನನ್ನ ಎಲ್ಲರೂ ಗುರುತಿಸುತ್ತಿರುವುದರಿಂದ ನಿರ್ಮಾಣ ಸಂಸ್ಥೆಗೆ ಅದೇ ಹೆಸರು ಇಟ್ಟಿದ್ದೇನೆ’ ಎನ್ನುತ್ತಾರೆ ಐಶಾನಿ ಶೆಟ್ಟಿ.
ಕಾಜಿ ಹೆಸರಿನ ಕಿರು ಚಿತ್ರ ನಿರ್ದೇಶನ ಮಾಡಿದ ಅನುಭವದ ಮೇಲೆ ಈ ಚಿತ್ರದ ಮೂಲಕ ನನ್ನೂರಿನ ಕತೆಯನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ನಾಯಕ, ನಾಯಕಿ ಇರುವುದಿಲ್ಲ. ಕತೆಯೇ ಮುಖ್ಯ ಪಾತ್ರಧಾರಿ.
- ಐಶಾನಿ ಶೆಟ್ಟಿ