ಬಚ್ಚನ್‌ ಮನೆಯಿಂದ ಹೊರಬಂದ ಐಶ್ವರ್ಯಾ ರೈ?: ಮಾಧ್ಯಮ ವರದಿ

| Published : Dec 16 2023, 02:00 AM IST

ಸಾರಾಂಶ

ಜನಪ್ರಿಯ ಬಾಲಿವುಡ್ ಜೋಡಿ ನಟ ಅಭಿಷೇಕ್‌ ಬಚ್ಚನ್‌ ಮತ್ತು ಮತ್ತು ನಟಿ ಐಶ್ವರ್ಯಾ ರೈ ಮಧ್ಯೆ ಮನಸ್ತಾಪವಾಗಿದೆ ಎಂಬ ವದಂತಿ ಬೆನ್ನಲ್ಲೇ ಐಶ್ವರ್ಯಾ, ತಮ್ಮ ಮಾವ ಅಮಿತಾಭ್‌ ಬಚ್ಚನ್‌ ಮನೆಯಿಂದ ಶುಕ್ರವಾರ ಹೊರನಡೆದಿದ್ದಾರೆ ಎಂದು ಝೂಮ್‌ ಟೀವಿ ಹಾಗೂ ಇತರ ಕೆಲವು ಇಂಗ್ಲಿಷ್‌ ವೆಬ್‌ಸೈಟ್‌ಗಳು ವರದಿ ಮಾಡಿವೆ

ಮುಂಬೈ: ಜನಪ್ರಿಯ ಬಾಲಿವುಡ್ ಜೋಡಿ ನಟ ಅಭಿಷೇಕ್‌ ಬಚ್ಚನ್‌ ಮತ್ತು ಮತ್ತು ನಟಿ ಐಶ್ವರ್ಯಾ ರೈ ಮಧ್ಯೆ ಮನಸ್ತಾಪವಾಗಿದೆ ಎಂಬ ವದಂತಿ ಬೆನ್ನಲ್ಲೇ ಐಶ್ವರ್ಯಾ, ತಮ್ಮ ಮಾವ ಅಮಿತಾಭ್‌ ಬಚ್ಚನ್‌ ಮನೆಯಿಂದ ಶುಕ್ರವಾರ ಹೊರನಡೆದಿದ್ದಾರೆ ಎಂದು ಝೂಮ್‌ ಟೀವಿ ಹಾಗೂ ಇತರ ಕೆಲವು ಇಂಗ್ಲಿಷ್‌ ವೆಬ್‌ಸೈಟ್‌ಗಳು ವರದಿ ಮಾಡಿವೆ. ಇದು ವಿಚ್ಛೇದನ ವದಂತಿಗೆ ಕಾರಣವಾಗಿದೆ. ಇತ್ತೀಚೆಗೆ ಅಮಿತಾಭ್ ಬಚ್ಚನ್‌ ಅವರು ತಮ್ಮ ಮಗಳು ಶ್ವೇತಾಗೆ ತಮ್ಮ ಬಂಗಲೆ ಬರೆದುಕೊಟ್ಟಿದ್ದರು. ಆಗಿನಿಂದ ಕುಟುಂಬದಲ್ಲಿ ಒಡಕು ಮೂಡಿದೆ ಎನ್ನಲಾಗಿದೆ.