ಸಾರಾಂಶ
ಡಾಲಿ ಧನಂಜಯ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರ ಸೆಟ್ಟೇರಿದೆ. ನಿರ್ಮಾಪಕಿ ಜಾನ್ವಿ ರಾಯಲ ಕ್ಲ್ಯಾಪ್ ಮಾಡಿದ್ದು, ನಿರ್ದೇಶಕ ಶಂಕರ್ ಗುರು ಅವರ ತಾಯಿ ಕ್ಯಾಮೆರಾಗೆ ಚಾಲನೆ ನೀಡಿದರು.
ಕನ್ನಡಪ್ರಭ ಸಿನಿವಾರ್ತೆ ಡಾಲಿ ಧನಂಜಯ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರ ಸೆಟ್ಟೇರಿದೆ. ನಿರ್ಮಾಪಕಿ ಜಾನ್ವಿ ರಾಯಲ ಕ್ಲ್ಯಾಪ್ ಮಾಡಿದ್ದು, ನಿರ್ದೇಶಕ ಶಂಕರ್ ಗುರು ಅವರ ತಾಯಿ ಕ್ಯಾಮೆರಾಗೆ ಚಾಲನೆ ನೀಡಿದರು.
ಈ ಹಿಂದೆ ‘ಬಡವ ರಾಸ್ಕಲ್’ ಸಿನಿಮಾ ಮಾಡಿದ್ದ ತಂಡದ ಹೊಸ ಪ್ರಯತ್ನವಿದು. ಶಂಕರ್ ಗುರು ನಿರ್ದೇಶಕರು. ಇದೊಂದು ಆ್ಯಕ್ಷನ್ ಹಾಗೂ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿದ್ದು, ಸತ್ಯ ರಾಯಲ ಬಂಡವಾಳ ಹೂಡಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನವಿದೆ. ಜನವರಿಯಿಂದ ಮೆಕ್ಸಿಕೋದಲ್ಲಿ ಚಿತ್ರೀಕರಣ ನಡೆಯಲಿದೆ.