ಸಾರಾಂಶ
ಹೊಸಬರೇ ಸೇರಿ ಮಾಡುತ್ತಿರುವ ಅವನಿರಬೇಕಿತ್ತು ಚಿತ್ರದ ಪೋಸ್ಟರ್ ಬಿಡುಗಡೆಗಡೆ ಇತ್ಚೀಚೆಗೆ ನಡೆಯಿತು.
ಕನ್ನಡಪ್ರಭ ಸಿನಿವಾರ್ತೆ
ಒಂದು ವಿಶೇಷವಾದ ವಿಡಿಯೋ ಮೂಲಕ ‘ಅವನಿರಬೇಕಿತ್ತು’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಝೇಂಕಾರ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಆಗಿರುವ ನಟರಾದ ಯಶ್ ಹಾಗೂ ದರ್ಶನ್ ಅವರ ಹೆಸರುಗಳನ್ನು ಬಳಸಿಕೊಂಡು ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಮುರಳಿ ಬಿ ಟಿ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಅಶೋಕ್ ಸಾಮ್ರಾಟ್ ನಿರ್ದೇಶಕರು. ಭರತ್ ಹಾಗೂ ಸೌಮ್ಯ ಚಿತ್ರದ ಜೋಡಿ. ಪ್ರಶಾಂತ್ ಸಿದ್ದಿ, ಕಿರಣ್ ಕುಮಾರ್, ಅಜಯ್ ಶರ್ಮ, ಲಕ್ಷ್ಮೀ ದೇವಮ್ಮ ನಟಿಸುತ್ತಿದ್ದಾರೆ. ಲೋಕಿ ತವಸ್ಯ, ಪೃಥ್ವಿ ಮಾಲೂರು ಹಾಗೂ ದೇವರಾಜ್ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ.