ಅವತಾರ ಪುರುಷ 2 ಚಿತ್ರದ ರ್‍ಯಾಪ್‌ ಸಾಂಗ್‌ ಬಿಡುಗಡೆ

| Published : Mar 23 2024, 01:07 AM IST

ಅವತಾರ ಪುರುಷ 2 ಚಿತ್ರದ ರ್‍ಯಾಪ್‌ ಸಾಂಗ್‌ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ 2 ಚಿತ್ರದ ರಾಪ್ ಸಾಂಗ್ ಬಿಡುಗಡೆ ಆಗಿದೆ. ಏಪ್ರಿಲ್ 5ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

ಕನ್ನಡಪ್ರಭ ಸಿನಿವಾರ್ತೆಶರಣ್‌ ಹಾಗೂ ಸಿಂಪಲ್‌ ಸುನಿ ಕಾಂಬಿನೇಶನ್‌ನ ‘ಅವತಾರ ಪುರುಷ 2’ ಏಪ್ರಿಲ್‌ 5ಕ್ಕೆ ತೆರೆ ಮೇಲೆ ಬರುತ್ತಿದ್ದು, ಈ ಚಿತ್ರದ ಒಂದು ರ್‍ಯಾಪ್‌ ಸಾಂಗ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ಸಂತ ಶಿಶುನಾಳ ಶರೀಫರ ‘ತರವಲ್ಲ ತಂಗಿ ನಿನ್ನ ತಂಬೂರಿ’ ಹಾಡಿನ ಸಾಲನ್ನು ಬಳಸಿಕೊಂಡು ರ್‍ಯಾಪರ್‌ ಎಂ ಸಿ ಬಿಜ್ಜು ತಂಡ ಈ ಹಾಡನ್ನು ರೂಪಿಸಿದೆ. ಈ ಹಾಡಿಗೆ ಅಭಿನಂದನ್‌ ಕಶ್ಯಪ್‌ ಸಂಗೀತ ನೀಡಿದ್ದಾರೆ.ಸಿಂಪಲ್‌ ಸುನಿ ಮಾತನಾಡಿ, ‘ನಿರ್ಮಾಪಕರು ಈ ಹಾಡನ್ನು ಮಾಡೋಣ ಎಂದಾಗ, ನಾನೇ ಮೊದಲು ಬೇಡ ಅಂದಿದ್ದೆ. ನಿರ್ಮಾಪಕರು ಪಟ್ಟು ಹಿಡಿದು ಮಾಡೋಣ ಎಂದರು. ಕೆಲವೇ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣವಾಯಿತು. ಹಾಡು ಬೇಡ ಎಂದವನಿಗೇ ಇಷ್ಟವಾಗುವಂತೆ ಈ ಹಾಡು ಮೂಡಿ ಬಂದಿದೆ’ ಎಂದರು.

ಈ ಹಾಡಿನಲ್ಲಿ ನಟಿ ಸಾತ್ವಿಕಾ ಹೆಜ್ಜೆ ಹಾಕಿದ್ದಾರೆ. ನಟ ಶರಣ್, ‘ನನಗೆ ಇದು ಮೊದಲ ರ್‍ಯಾಪ್‌ ಸಾಂಗ್‌. ನಾನು ಡ್ಯಾನ್ಸ್‌ ಮಾಡದೆ ಈ ಹಾಡಿನಲ್ಲಿ ಕಾಣಿಸಿಕೊಂಡಿರುವುದು ದೊಡ್ಡ ಸವಾಲು. ಅದೇ ಹೈಲೈಟ್‌ ಕೂಡ’ ಎಂದರು.

ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ, ‘ಆನಂದ್ ಆಡಿಯೋದಲ್ಲಿ ಹಾಡು ಬಿಡುಗಡೆ ಆಗಿದೆ. ‘ಅವತಾರ ಪುರುಷ’ ಪಾರ್ಟ್‌ 1 ನೋಡಿದವರು ಪಾರ್ಟ್‌ 2 ನೋಡಲು ಬರುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದರು. ನಟಿ ಸಾತ್ವಿಕಾ, ವಿತರಕ ಮೋಹನ್‌, ಎಂ ಸಿ ಬಿಜ್ಜು ತಂಡ ಹಾಜರಿದ್ದರು. ಆಶಿಕಾ ರಂಗನಾಥ್‌, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ತಾರಾಬಳಗದಲ್ಲಿದ್ದಾರೆ.