ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಬೆಳಕೆ ಹೆಸರಿನ ಪರಿಸರ ಜಾಗೃತಿ ಮೂಡಿಸುವ ಹಾಡು ಬಿಡುಗಡೆ.
ಕನ್ನಡಪ್ರಭ ಸಿನಿವಾರ್ತೆ
ಜಾಗತಿಕ ತಾಪಮಾನದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ‘ಬೆಳಕೆ’ ಹಾಡು ಮೂಡಿ ಬಂದಿದೆ. ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಈ ಹಾಡನ್ನು ಆದರ್ಶ ಅಯ್ಯಂಗಾರ್ ಹಾಡುವ ಜತೆಗೆ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಮರವಂತೆ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಮಾತನಾಡಿ, ‘ಪರಿಸರ ನಾಶದಿಂದ ತಾಪಮಾನ ಹೆಚ್ಚಾಗಿದೆ. ಗಿಡ ಬೆಳಸುವುದು ಹಾಗೂ ಈಗಿರುವ ಗಿಡಗಳನ್ನು ಉಳಿಸುವುದೇ ಇದಕ್ಕೆ ಪರಿಹಾರ. ಇಂತಹ ವಿಷಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಹಾಡು ಮಾಡಿದ್ದೇವೆ. ಎಲ್ಲರೂ ನೋಡಿ’ ಎಂದರು. ಪ್ರಮೋದ್ ಮರವಂತೆ, ಆದರ್ಶ ಅಯ್ಯಂಗಾರ್ ಇದ್ದರು.