ಜೇಮ್ಸ್‌ ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಬರ್ಮ’ಕ್ಕೆ ಬಾಲಿವುಡ್‌ ನಟ ಶಾವರ್ ಆಲಿ ಆಗಮನವಾಗಿದೆ.

ಜೇಮ್ಸ್‌ ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಬರ್ಮ’ಕ್ಕೆ ಬಾಲಿವುಡ್‌ ನಟ ಶಾವರ್ ಆಲಿ ಆಗಮನವಾಗಿದೆ. ಈ ಸಿನಿಮಾದಲ್ಲಿನ ವಿಶೇಷ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಹಿಂದೆ ಕನ್ನಡದಲ್ಲಿ ದರ್ಶನ್ ನಟನೆಯ ‘ಚಕ್ರವರ್ತಿ’ ಸಿನಿಮಾದಲ್ಲಿ ಶಾವರ್‌ ನಟಿಸಿದ್ದರು.

ರಕ್ಷ್ ರಾಮ್ ಈ ಆ್ಯಕ್ಷನ್ ಚಿತ್ರದ ನಾಯಕ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಬರ್ಮ’ ಚಿತ್ರ ತೆರೆಗೆ ಬರಲಿದೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಇದೆ.