ಸಾರಾಂಶ
ಶಂಕರ್ ನಿರ್ದೇಶನದ, ‘ಕಲಿವೀರ’ ಚಿತ್ರ ನಿರ್ಮಿಸಿದ್ದ ಕೆಎಂಪಿ ಶ್ರೀನಿವಾಸ್ ನಿರ್ಮಾಣದ ‘ಬ್ರಹ್ಮರಾಕ್ಷಸ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. 1980 - 90ರ ಕತೆಯಿರುವ ಚಿತ್ರದಲ್ಲಿ ಅಂಕುಶ್ ಏಕಲವ್ಯ ಹಾಗೂ ಪಲ್ಲವಿ ಗೌಡ ಜೋಡಿಯಾಗಿ ನಟಿಸಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ಶಂಕರ್ ನಿರ್ದೇಶನದ, ‘ಕಲಿವೀರ’ ಚಿತ್ರ ನಿರ್ಮಿಸಿದ್ದ ಕೆಎಂಪಿ ಶ್ರೀನಿವಾಸ್ ನಿರ್ಮಾಣದ ‘ಬ್ರಹ್ಮರಾಕ್ಷಸ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. 1980 - 90ರ ಕತೆಯಿರುವ ಚಿತ್ರದಲ್ಲಿ ಅಂಕುಶ್ ಏಕಲವ್ಯ ಹಾಗೂ ಪಲ್ಲವಿ ಗೌಡ ಜೋಡಿಯಾಗಿ ನಟಿಸಿದ್ದಾರೆ.ನಿರ್ದೇಶಕ ಶಂಕರ್, ‘ನಾನು ಪೊಲೀಸ್ ಅಥವಾ ಸೈನಿಕ ಆಗಬೇಕು ಎಂದು ಕನಸು ಕಂಡವನು. ಮೂರು ಕಿರುಚಿತ್ರಗಳನ್ನು ಮಾಡಿದ್ದೇನೆ. ಈಗ ಮೊದಲ ಬಾರಿ ನಿರ್ದೇಶನ ಮಾಡಿರುವೆ’ ಎಂದರು.
ಶ್ರೀನಿವಾಸ್, ‘ನಮ್ಮ ಸಂಸ್ಥೆಯ ಎರಡನೇ ಚಿತ್ರವಿದು. ಒಳ್ಳೆಯ ಚಿತ್ರಗಳನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ’ ಎಂದರು.ಅಂಕುಶ್ ಏಕಲವ್ಯ, ‘ನಾವು ಕಷ್ಟಪಟ್ಟು ಮಾಡಿದ ಸಿನಿಮಾ ಇದು. ಮೊದಲ ಸಿನಿಮಾದಲ್ಲಿ ಆ್ಯಕ್ಷನ್ ನೋಡಿದ್ರಿ, ಇದರಲ್ಲಿ ಡ್ಯಾನ್ಸ್ ನೋಡಬಹುದು’ ಎಂದರು. ಬಿರಾದರ್, ಭವ್ಯ, ಸ್ವಪ್ನ ನಟಿಸಿದ್ದಾರೆ. ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಿದ್ದಾರೆ. ಪಲ್ಲವಿ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ ಮ ಹರೀಶ್ ಹಾಗೂ ಸಂಗೀತ ನಿರ್ದೇಶಕ ಎಂ ಎಸ್ ತ್ಯಾಗರಾಜ್ ಇದ್ದರು.