ನಿರೂಪ್ ಭಂಡಾರಿ ನಟನೆಯ, ಸಚಿನ್ ವಾಲಿ ನಿರ್ದೇಶನದ ಚಿತ್ರಕ್ಕೆ ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರದಲ್ಲಿ ಬೃಂದಾ ಅವರು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಪಾತ್ರದಲ್ಲಿ ನಟಿಸಲಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ನಿರೂಪ್ ಭಂಡಾರಿ ನಟನೆಯ, ಸಚಿನ್ ವಾಲಿ ನಿರ್ದೇಶನದ ಚಿತ್ರಕ್ಕೆ ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರದಲ್ಲಿ ಬೃಂದಾ ಅವರು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಪಾತ್ರದಲ್ಲಿ ನಟಿಸಲಿದ್ದಾರೆ.‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ನಂತರ ಸಾಕಷ್ಟು ಬ್ಯುಸಿ ಆಗಿರುವ ಬೃಂದಾ ಆಚಾರ್ಯ, ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’, ‘ಎಕ್ಸ್ ಆ್ಯಂಡ್ ವೈ’, ‘ಒಂದ್ಸಲ ಮೀಟ್ ಮಾಡೋಣ’ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈಗ ಇದರ ಸಾಲಿಗೆ ನಿರೂಪ್ ಭಂಡಾರಿ ನಟನೆಯ ಚಿತ್ರವೂ ಸೇರಿಕೊಂಡಿದೆ.
‘ಸಿಂಪಲ್ ಸುನಿ, ಸತ್ಯಪ್ರಕಾಶ್, ಎಸ್ ನಾರಾಯಣ್, ಹೊಸ ಪ್ರತಿಭೆ ಸಚಿನ್ ವಾಲಿ ಹೀಗೆ ಒಳ್ಳೆಯ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸುವ ಅಕಾಶಗಳು ಬರುತ್ತಿವೆ. ನಾಲ್ಕು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ’ ಎಂಬುದು ಬೃಂದಾ ಆಚಾರ್ಯ ಮಾತು.