ನಾಯಕ ರಕ್ಷ್‌ ಜನ್ಮದಿನಕ್ಕೆ ಬರ್ಮದ ಹೊಸ ಪೋಸ್ಟರ್‌ ಬಿಡುಗಡೆ

| Published : Jan 11 2024, 01:31 AM IST

ನಾಯಕ ರಕ್ಷ್‌ ಜನ್ಮದಿನಕ್ಕೆ ಬರ್ಮದ ಹೊಸ ಪೋಸ್ಟರ್‌ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸೀರಿಯಲ್ ನಟ ರಕ್ಷ್ ಜನ್ಮದಿನದಂದು ಅವರ ನಟನೆಯ ಬರ್ಮಾ ಚಿತ್ರದ ಲುಕ್ ಬಿಡುಗಡೆ

ಕನ್ನಡಪ್ರಭ ಸಿನಿವಾರ್ತೆ

ಚೇತನ್ ಹಾಗೂ ರಕ್ಷ್ ರಾಮ್ ಜೋಡಿಯ ‘ಬರ್ಮ’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ನಾಯಕ ರಕ್ಷ್‌ ಅವರ ಹುಟ್ಟುಹಬ್ಬದ ಅಂಗವಾಗಿ ಬರ್ಮ ಚಿತ್ರತಂಡ ಹೊಸ ಪೋಸ್ಟರ್ ಉಡುಗೊರೆಯಾಗಿ ನೀಡಿದೆ. ಇದರಲ್ಲಿ ಮಾಸ್ ಗೆಟಪ್‌ನಲ್ಲಿ ರಕ್ಷ್ ಕಾಣಿಸಿಕೊಂಡಿದ್ದಾರೆ.

ಆಕ್ಷನ್ ಎಂಟರ್‌ಟೈನರ್ ಪ್ಯಾನ್‌ ಇಂಡಿಯನ್‌ ಸಿನಿಮಾ ಬರ್ಮಾವನ್ನು ರಕ್ಷ್‌ ಅವರೇ ನಿರ್ಮಿಸುತ್ತಿದ್ದಾರೆ. ಚೇತನ್ ಕುಮಾರ್ ನಿರ್ದೇಶನ, ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ.