ಸಾರಾಂಶ
ಉತ್ತರ ಪ್ರದೇಶದ ಯುವತಿ (ಶ್ವಾನ ಪ್ರೇಮಿ)ಯೊಬ್ಬರು ತಮ್ಮ ಮನೆಯ ನಾಯಿ 9 ಮರಿಗಳಿಗೆ ಜನ್ಮ ನೀಡಿದೆ ಎಂದು ಸಂತಸಕ್ಕೆ ಊರಿನವರಿಗೆಲ್ಲ ಪಾರ್ಟಿ ಕೊಡಿಸಿದ್ದಾರೆ.
ನಾವೆಲ್ಲ ಮನೆಯಲ್ಲಿ ಶುಭ ಸಮಾರಂಭವಾದರೆ, ಅಥವ ಇನ್ನಿತರ ಕಾರ್ಯಕ್ರಮಗಳಿದ್ದರೆ ಜನರನ್ನೆಲ್ಲ ಕರೆದು ಅವರಿಗೆ ಭೂರಿ ಭೋಜನ ಹಾಕಿಸುವುದನ್ನು ಕಂಡಿರುತ್ತೇವೆ. ಆದರೆ ಉತ್ತರ ಪ್ರದೇಶದ ಯುವತಿ (ಶ್ವಾನ ಪ್ರೇಮಿ)ಯೊಬ್ಬರು ತಮ್ಮ ಮನೆಯ ನಾಯಿ 9 ಮರಿಗಳಿಗೆ ಜನ್ಮ ನೀಡಿದೆ ಎಂದು ಸಂತಸಕ್ಕೆ ಊರಿನವರಿಗೆಲ್ಲ ಪಾರ್ಟಿ ಕೊಡಿಸಿದ್ದಾರೆ. ‘ಛಾಟ್ನಿ’ ಹೆಸರಿನ (ನಾಯಿಯ ಹೆಸರು) ಹಲವು ಬಾರಿ 3-4 ಮರಿಗಳಿಗೆ ಜನ್ಮ ನೀಡಿತ್ತಂತೆ. ಆದರೆ ಈ ಬಾರಿ ಬರೋಬ್ಬರಿ 9 ಮರಿ ಹಾಕಿದ ಕಾರಣ ಎಲ್ಲರಿಗೂ ಪಾರ್ಟಿ ಕೊಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಇದರ ಜೊತೆಗೆ ನಾಯಿಗೂ ಮನುಷ್ಯರಿಗೆ ಮಾಡುವ ರೀತಿಯಲ್ಲಿ ಪೂಜೆ ಮಾಡಿ ಅದರ ಕಾಲಿಗೆ ಕೆಂಪು ಸಿಂಗಾರ ಮಾಡಿದ್ದಾರಂತೆ.