ಟೋಬಿ ಬೆಡಗಿ ಚೈತ್ರಾ ಆಚಾರ್ ಇದೀಗ ಮಾರ್ನೆಮಿ ಸಿನಿಮಾಕ್ಕೆ ನಾಯಕಿ - ಕಿರುತೆರೆ ನಟ ರಿತ್ವಿಕ್‌ ನಾಯಕ

| Published : Sep 20 2024, 01:39 AM IST / Updated: Sep 20 2024, 05:48 AM IST

ಸಾರಾಂಶ

ಟೋಬಿ ಬೆಡಗಿ ಚೈತ್ರಾ ಆಚಾರ್ ಇದೀಗ ಮಾರ್ನೆಮಿ ಎಂಬ ಸಿನಿಮಾಕ್ಕೆ ನಾಯಕಿ.

ಕಿರುತೆರೆ ನಟ ರಿತ್ವಿಕ್‌ ಮತ್ತು ‘ಟೋಬಿ’ ಖ್ಯಾತಿಯ ಚೈತ್ರಾ ಜೆ ಆಚಾರ್‌ ನಾಯಕ, ನಾಯಕಿಯಾಗಿರುವ ಹೊಸ ಸಿನಿಮಾ ‘ಮಾರ್ನಮಿ’ಯ ಟೈಟಲ್ ಟೀಸರ್‌ ಬಿಡುಗಡೆಯಾಗಿದೆ. ರಿಶಿತ್ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ.ನಿರ್ದೇಶಕ ರಿಶಿತ್‌, ‘ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷದ ಸಂಸ್ಕೃತಿಯ ಎಳೆ ಚಿತ್ರದಲ್ಲಿದೆ. ಇದೊಂದು ಲವ್‌ಸ್ಟೋರಿ. ಆ್ಯಕ್ಷನ್, ಎಮೋಷನ್, ಕಾಮಿಡಿಯ ಕಥಾಹಂದರವಿದೆ’ ಎಂದಿದ್ದಾರೆ.

ನಟಿ ಚೈತ್ರಾ ಆಚಾರ್‌, ‘ಕಥೆ ಬಹಳ ಇಷ್ಟವಾಯ್ತು. ಟೆಕ್ನಿಕಲ್ ಆಗಿ ಚಿತ್ರ ಸ್ಟ್ರಾಂಗ್ ಇದೆ. ರಿಶಿತ್ ಕಥೆ ಹೇಳಲು ಬಂದಾಗ ಎಲ್ಲಿಯೂ ಬೋರ್ ಆಗಲಿಲ್ಲ. ಇಷ್ಟು ಬೇಗ ಮುಗಿಯಿತಾ ಅನಿಸಿತು. ಸಿನಿಮಾ ಬಗ್ಗೆ ಎಕ್ಸೈಟ್ ಆಗಿದ್ದೇನೆ’ ಎಂದರು. ನಾಯಕ ರಿತ್ವಿಕ್‌, ‘ದಸರಾ ಸಂದರ್ಭವನ್ನು ತುಳುವಿನಲ್ಲಿ ಮಾರ್ನಮಿ ಎಂದು ಕರೆಯುತ್ತಾರೆ’ ಎಂದು ಹೇಳಿದರು.

ಸಂಗೀತ ನಿರ್ದೇಶಕ ಚರಣ್ ರಾಜ್‌ ಇದ್ದರು. ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ಯಶ್ ಶೆಟ್ಟಿ, ಮೈಮ್ ರಾಮದಾಸ್, ಚೈತ್ರ ಶೆಟ್ಟಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.