ಸಾರಾಂಶ
ನಾದಬ್ರಹ್ಮ ಹಂಸಲೇಖ ಗರಡಿಯಲ್ಲಿ ಪಳಗಿರುವ ಯಶ್ಚಿತ್ ಗೌಡ ನಿರ್ದೇಶನದ ‘ಕಲರ್ ಹನುಮ’ ಕಿರುಚಿತ್ರ ಪ್ರದರ್ಶನವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಹಂಸಲೇಖ ಆಗಮಿಸಿ ಚಿತ್ರವನ್ನು ವೀಕ್ಷಿಸಿ ಮೆಚ್ಚಿ ಮಾತನಾಡಿದರು.
ಕನ್ನಡಪ್ರಭ ಸಿನಿವಾರ್ತೆ
ನಾದಬ್ರಹ್ಮ ಹಂಸಲೇಖ ಗರಡಿಯಲ್ಲಿ ಪಳಗಿರುವ ಯಶ್ಚಿತ್ ಗೌಡ ನಿರ್ದೇಶನದ ‘ಕಲರ್ ಹನುಮ’ ಕಿರುಚಿತ್ರ ಪ್ರದರ್ಶನವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಹಂಸಲೇಖ ಆಗಮಿಸಿ ಚಿತ್ರವನ್ನು ವೀಕ್ಷಿಸಿ ಮೆಚ್ಚಿ ಮಾತನಾಡಿದರು.‘ತೆರೆ ಮೇಲೆ ಎಲ್ಲರೂ ಮಚ್ಚು, ಲಾಂಗುಗಳಲ್ಲಿ ಹೊಡಿಯುತ್ತಿರುವಾಗ ಯಾವ ಆಯುಧವೂ ಇಲ್ಲದೆ ಸಿನಿಮಾ ಮಾಡಿದ್ದಾನೆ ನನ್ನ ವಿದ್ಯಾರ್ಥಿ. ಮೃದು ಸ್ವಭಾವದವನಾಗಿದ್ದರಿಂದ ಯಶ್ಚಿತ್‌ಗೆ ಆಗಾಗ ಚಾರ್ಜ್ ಮಾಡುತ್ತಿದ್ದೆ. ಈಗ ನೋಡಿದರೆ ಒಳ್ಳೆಯ ಕಿರು ಚಿತ್ರ ನಿರ್ದೇಶಿಸಿದ್ದಾನೆ. ಈತ ನನ್ನ ವಿದ್ಯಾರ್ಥಿ ಎಂದು ಹೇಳುವುದಕ್ಕೆ ಹೆಮ್ಮೆ ಆಗುತ್ತದೆ’ ಎಂದು ಹಂಸಲೇಖ ಹೇಳಿದರು.ಚಿತ್ರದ ನಾಯಕನಿಗೆ ಯಾವುದೇ ಬಣ್ಣಗಳು ಕಾಣಲ್ಲ. ಎಲ್ಲವೂ ಕಪ್ಪು ಬಿಳುಪಿನಲ್ಲೇ ಕಾಣುತ್ತದೆ. ಹೀಗೆ ಕಲರ್ ಬ್ಲೈಂಡ್ ವ್ಯಕ್ತಿ ಸುತ್ತ ಈ ಚಿತ್ರದ ಕತೆ ಸಾಗುತ್ತದೆ. ಜಗದೀಶ್ ಎಂ ದೇವನಹಳ್ಳಿ ನಿರ್ಮಿಸಿರುವ ಈ ಚಿತ್ರದಲ್ಲಿ ನವೀನ್ ಎಸ್.ಆರ್, ದೀಪಶ್ರೀ ಗೌಡ, ಚೇತನ್, ಕುಶಾಲ್ ನಾರಾಯಣ್ ಗೌಡ, ಮಹರ್ಷಿ, ಲಲಿತಾ, ತೇಜಸ್ವಿನಿ ಗೌಡ ನಟಿಸಿದ್ದಾರೆ.