ಅರಮನೆಯಿಂದ 50 ಕೋಟಿಯಚಿನ್ನದ ಕಮೋಡ್‌ ಕಳ್ಳತನ

| Published : Nov 19 2023, 01:30 AM IST

ಸಾರಾಂಶ

ಬ್ರಿಟನ್ನಿನ ಬ್ಲೆನ್‌ಹೈಮ್ ಪ್ಯಾಲೆಸ್‌ನಲ್ಲಿದ್ದ ಚಿನ್ನದ ಕಮೋಡ್‌ ಕಳ್ಳತನವಾಗಿದೆ.

ಚಿನ್ನದ ಸರ, ಬಳೆಯನ್ನು ಕಳ್ಳತನ ಮಾಡುವುದು ನೋಡಿದ್ದೇವೆ. ಆದರೆ ಭದ್ರತಾ ಸಿಬ್ಬಂದಿಗಳಿದ್ದ ಪ್ಯಾಲೆಸ್‌ವೊಂದರಲ್ಲಿದ್ದ ಚಿನ್ನದ ಕಮೋಡ್‌ ಅನ್ನೇ ಕಳ್ಳತನ ಮಾಡಿದ್ದು ಗೊತ್ತಿದೆಯಾ. ಹೌದು., ಬ್ರಿಟನ್ನಿನ ಬ್ಲೆನ್‌ಹೈಮ್ ಪ್ಯಾಲೆಸ್‌ನಲ್ಲಿದ್ದ ಚಿನ್ನದ ಕಮೋಡ್‌ ಕಳ್ಳತನವಾಗಿದೆ. ಅದರೆ ಇಂದು ನಿನ್ನೆಯಲ್ಲ. ಬರೋಬ್ಬರಿ ನಾಲ್ಕು ವರ್ಷಗಳ ಹಿಂದೆಯೇ. ಆದರೆ ಈ ತನಕ ಈ ಚಿನ್ನದ ಕಮೋಡ್‌ ಮಾತ್ರ ಪೊಲೀಸರಿಗೆ ಸಿಕ್ಕಿಲ್ಲ. ಅಷ್ಟೇ ಅಲ್ಲ ಕದ್ದ ಆರೋಪಿಗಳೂ ಯಾರೆಂದು ಗೊತ್ತಾಗಿಲ್ಲ. ಆದರೆ ಮೊನ್ನೆಯಷ್ಟೇ ಶಂಕಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿವರೆಗೆ ಚಿನ್ನದ ಕಮೋಡ್‌ ಕಳ್ಳತನದ ಆರೋಪದ ಮೇಲೆ 7 ಮಂದಿ ಬಂಧಿಸಲಾಗಿದೆ.