ಸಾರಾಂಶ
ಬೆಂಗಳೂರು 16ನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 3000ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಭಾನುವಾರ ವೀಕೆಂಡ್ ಆಗಿರುವ ಕಾರಣ ಸಿನಿಮಾಸಕ್ತರ ಸಂಖ್ಯೆ ಹೆಚ್ಚಿತ್ತು. ಈ ವೇಳೆ ಆಸ್ಕರ್ ವಿಜೇತ ಸಿನಿಮಾಗಳಿಗೆ ಉದ್ದದ ಸರತಿ ಸಾಲಿತ್ತು.
ಸಿನಿವಾರ್ತೆ

‘ಫೋರ್ ಮದರ್ಸ್’, ‘ಅನೊರ’ದಂಥ ಸಿನಿಮಾಗಳನ್ನ ನೋಡಿದ ಪ್ರೇಕ್ಷಕರು ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಜೊತೆಗೆ ಶನಿವಾರ ಉದ್ಘಾಟನಾ ಸಿನಿಮಾವಾಗಿ ಪ್ರದರ್ಶನಗೊಂಡಿದ್ದ ‘ಪೈರ್’ ಸಿನಿಮಾವನ್ನೂ ಸಾಲಲ್ಲಿ ನಿಂತು ನೋಡಿ ಮೆಚ್ಚಿಕೊಂಡಿದ್ದಾರೆ. ‘ಕ್ವೀನ್’, ‘ದಿ ಸ್ಟೋರಿ ಆಫ್ ಸುಲೈಮಾನ್’, ‘ಬ್ಲ್ಯಾಕ್ ಡಾಗ್’, ‘ಟು ಎ ಲ್ಯಾಂಡ್ ಆಫ್ ಅನ್‌ನೋನ್’, ‘ದ ಸೀಡ್ ಆಫ್ ದ ಸೆಕ್ರೆಡ್ ಫಿಗ್’, ‘ಡೋಂಟ್ ಯು ಲೆಟ್ ಮಿ ಗೋ’, ‘ಮೆಮೊರೀಸ್ ಆಫ್ ಬರ್ನಿಂಗ್ ಬಾಡಿ’, ‘ಮನಸ್’, ‘ಐ ಆ್ಯಮ್ ಸ್ಟಿಲ್ ಹಿಯರ್’ - ಜನಮೆಚ್ಚುಗೆಗೆ ಪಾತ್ರವಾದ ಇತರ ಚಿತ್ರಗಳು. ‘
ಸಿನಿಮೋತ್ಸವದಲ್ಲಿ ಮಲಯಾಳಂನ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಾ ಬಿಜು ಕುಮಾರ್ ದಾಮೋದರನ್, ಗೋವಾದ ನಿರ್ದೇಶಕ, ಸಿನಿಮಾ ತಜ್ಞ ಪಂಕಜ್ ಸಕ್ಸೇನಾ ಸೇರಿದಂತೆ ಹಲವು ಖ್ಯಾತ ನಿರ್ದೇಶಕರು, ಸಿನಿಮಾ ತಜ್ಞರು ಭಾಗಿಯಾಗಿದ್ದಾರೆ. ಮುಖ್ಯವಾಗಿ ಏಷ್ಯನ್, ಇಂಡಿಯನ್ ಹಾಗೂ ಕನ್ನಡ ಸಿನಿಮಾ ವಿಭಾಗದ ಸ್ಪರ್ಧೆಗಳಲ್ಲಿರುವ ಚಿತ್ರತಂಡದವರು ಭಾಗಿಯಾಗಿ ಸಿನಿಮಾಸಕ್ತರ ಜೊತೆ ಚರ್ಚೆ ನಡೆಸಿದ್ದಾರೆ. ಮೊದಲ ದಿನ ಸಿನಿಮೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವರ್ಲ್ಡ್ ಸಿನಿಮಾ, ಇಂಡಿಯನ್ ಸಿನಿಮಾಗಳಲ್ಲದೇ ವಿಶೇಷ ಪ್ರದರ್ಶನ ಕಾಣುತ್ತಿರುವ ರೆಟ್ರೋಸ್ಪೆಕ್ಟಿವ್ ಚಿತ್ರಗಳೂ ತುಂಬಿದ ಗೃಹದಲ್ಲಿ ಪ್ರದರ್ಶನ ಕಂಡಿವೆ. ಕ್ರಿಸ್ಟೋಫ್ ಕೀಸ್ಲೋಸ್ಕಿ ಸಿನಿಮಾಗಳ ಬಗ್ಗೆ ಜನರ ಕುತೂಹಲ ಹೆಚ್ಚಿತ್ತು’ ಎಂದು ಬಿಫ್ಸ್‌ನ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್ ತಿಳಿಸಿದ್ದಾರೆ.