ಸಾರಾಂಶ
ದರ್ಶನ್ ಮತ್ತು ತಂಡ ರಾಜಸ್ಥಾನದಲ್ಲಿ ಡೆವಿಲ್ ಸಿನಿಮಾ ಶೂಟ್ ಮಾಡಿದ್ದು ಅದೀಗ ಸಂಪೂರ್ಣಗೊಂಡಿದೆ.
ಸಿನಿವಾರ್ತೆ
ರಾಜಸ್ಥಾನದಲ್ಲಿ ನಡೆಯುತ್ತಿದ್ದ ‘ಡೆವಿಲ್’ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ ಎನ್ನಲಾಗಿದೆ. ರಾಜಸ್ಥಾನ ಹಾಗೂ ಉದಯಪುರದ, ಈವರೆಗೆ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಳ್ಳದ ಅಪರೂಪದ ತಾಣಗಳಲ್ಲಿ ಕಳೆದೊಂದು ವಾರದಿಂದ ‘ಡೆವಿಲ್’ ಸಿನಿಮಾದ ಮೂರನೇ ಹಂತದ ಶೂಟಿಂಗ್ ಭರದಿಂದ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ದರ್ಶನ್ ಜೊತೆ ನಾಯಕಿ ರಚನಾ ರೈ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶರ್ಮಿಳಾ ಮಾಂಡ್ರೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮೂಲಗಳ ಪ್ರಕಾರ ದರ್ಶನ್ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಏಪ್ರಿಲ್ ಕೊನೆಯಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಕಾಶ್ ವೀರ್ ನಿರ್ದೇಶನ, ನಿರ್ಮಾಣದ ಚಿತ್ರವಿದು.
)
)

;Resize=(128,128))
;Resize=(128,128))
;Resize=(128,128))
;Resize=(128,128))