ಸಾರಾಂಶ
ಬ್ಲಿಂಕಿಟ್‌ನಲ್ಲಿ ಡೆಲಿವರಿ ಮಾಡಿ ಗ್ರಾಹಕಳ ಚಪ್ಪಲಿ ಕದ್ದೊಯ್ದ!
ಇತ್ತೀಚೆಗೆ ತಂತ್ರಜ್ಞಾನ ಬೆಳವಣಿಗೆಯಾಗುತ್ತಿದ್ದಂತೆ ಮನುಷ್ಯನೂ ಬದಲಾವಣೆ ಆಗುತ್ತಿದ್ದಾನೆ. ಹಿಂದೆ ಮನೆಗೆ ಬೇಕಾದ ವಸ್ತುಗಳನ್ನು ನಾವು ವೈಯಕ್ತಿಕವಾಗಿ ಹೋಗಿ ಅಂಗಡಿಯಿಂದ ಖರೀದಿ ಮಾಡುತ್ತಿದ್ದೆವು. ಆದರೆ ಈ ಮೊಬೈಲ್ ಬಂದ ಮೇಲೆ ಅದರ ದುಷ್ಪರಿಣಾಮಗಳೂ ಹೆಚ್ಚಾಗ ತೊಡಗಿದೆ. ಇದಕ್ಕೆ ಉದಾಹರಣೆ ಎಂಬಂತೆ, ದೆಹಲಿಯಲ್ಲಿ ಒಂದು ಘಟನೆ ನಡೆದಿದೆ. ಅದೇನಂದರೆ, ಮಹಿಳೆಯೊಬ್ಬರು ತಮಗೆ ಬೇಕಾದ ವಸ್ತುವನ್ನು ಬ್ಲಿಂಕಿಟ್ ಎಂಬ ಆ್ಯಪ್‌ನಿಂದ ಆರ್ಡರ್ ಮಾಡಿದ್ದಾರೆ. ಆದರೆ ಡೆಲಿವರಿ ಬಾಯ್ ವಸ್ತು ಕೊಟ್ಟು ಆಕೆಯ ಚಪ್ಪಲಿ ಕದ್ದೊಯ್ದಿದ್ದಾನೆ. ಬಳಿಕ ಎರಡು ಗಂಟೆ ಆದಮೇಲೆ ಮತ್ತೆ ಅದನ್ನು ವಾಪಸ್ ಇಟ್ಟು ಹೋಗಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ದೂರು ದಾಖಲಿಸಿದ್ದಾರೆ.