ಪೃಥ್ವಿ ಅಂಬರ್‌ ನಟನೆಯ ಚೌಕಿದಾರ್‌ ಸಿನಿಮಾಕ್ಕೆ ಧನ್ಯಾ ನಾಯಕಿ.

ಕನ್ನಡಪ್ರಭ ಸಿನಿವಾರ್ತೆ

ಪೃಥ್ವಿ ಅಂಬಾರ್‌ ನಟನೆಯ, ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಸಿನಿಮಾಕ್ಕೆ ಧನ್ಯಾ ರಾಮ್‌ಕುಮಾರ್‌ ನಾಯಕಿ ಆಗಿದ್ದಾರೆ. ಸಾಯಿಕುಮಾರ್ ಮುಖ್ಯಪಾತ್ರದಲ್ಲಿದ್ದಾರೆ. ಜುಲೈ 3ರಂದು ಸಿನಿಮಾ ಸೆಟ್ಟೇರಲಿದೆ. ಡಾ.ಕಲ್ಲಹಳ್ಳಿ ಚಂದ್ರಶೇಖರ್ ಚಿತ್ರದ ನಿರ್ಮಾಪಕರು.