ಸಾರಾಂಶ
ಶ್ರೀರಂಗಪಟ್ಟಣ : ಪತ್ರಕರ್ತ ಎಚ್.ವಿ.ಪುಟ್ಟಸ್ವಾಮಿ ನಿರ್ದೇಶನದ ಧರ್ಮಿಷ್ಠ ಚಲನಚಿತ್ರದ ಮಹೂರ್ತ ಪಟ್ಟಣದ ಕ್ಷಣಾಂಭಿಕ ದೇವಾಲಯದಲ್ಲಿ ಕ್ಲಾಪ್ ಮಾಡುವ ಮೂಲಕ ನೆರವೇರಿತು.
ಈ ವೇಳೆ ಪತ್ರಕರ್ತ ಎಚ್.ವಿ.ಪುಟ್ಟಸ್ವಾಮಿ ಮಾತನಾಡಿ, ರಾಗಶ್ರೀ ಫಿಲಂಸ್ ಪ್ರೊಡಕ್ಷನ್ ವತಿಯಿಂದ ಧರ್ಮಿಷ್ಠ ಚಿತ್ರದ ಚಿತ್ರಿಕರಣ ಮಾಡಲಾಗುತ್ತಿದೆ. ಸಂಪೂರ್ಣ ಗ್ರಾಮೀಣ ಕಥಾಹಂದರದೊಂದಿಗೆ ಕಥೆ ಸಾಗಲಿದೆ ಎಂದರು.
ಚಿತ್ರದ ಷೂಟಿಂಗ್ ಮೂರು ಹಂತದಲ್ಲಿ ನಡೆಯಲಿದೆ. ಕಥೆ, ಸಾಹಿತ್ಯ, ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತು ಕೊಂಡಿದ್ದೇನೆ. ಭಾಸ್ಕರ್ ಕೃಷ್ಣ ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ, ಎಂ.ಚೇತನ್ ಛಾಯಾಗ್ರಹಣ ಇರಲಿದೆ. ಈಗಾಗಲೇ ತ್ರಿಭುಜ ಮತ್ತು ತಿರುವು ಚಲನ ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಲಾಗಿದೆ ಎಂದರು.
ಅಜಿತ್ ಕುಮಾರ್ (ಜೂನಿಯರ್ ರಾಜ್ ಕುಮಾರ್) ಮಾತನಾಡಿ, ಧರ್ಮಿಷ್ಠ ಎಂದರೆ ನ್ಯಾಯ, ಧರ್ಮ, ಸತ್ಯವನ್ನು ಎತ್ತಿ ಹಿಡಿಯುವ ಪಾತ್ರ. ಈ ಚಿತ್ರದ ಮುಖ್ಯ ಪಾತ್ರದ ಹೊಣೆಯನ್ನು ನಿರ್ದೇಶಕರು ನನಗೆ ವಹಿಸಿದ್ದಾರೆ. ಹಾಗಾಗಿ ಆ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ತಾರಾ ಬಳಗದಲ್ಲಿ ಮೈತ್ರಿ, ಕವಿತಾ, ಪ್ರೀತಮ್ ಪ್ರಮುಖ ಪಾತ್ರ ನಿರ್ವಹಿಸಲಿದ್ದರು, ಎ.ಜಿ.ರಾಮಚಂದ್ರರಾವ್, ಡಾ.ಮಿನ್ಕೇರೆ ಅಂಜನಪ್ಪ, ಸುಮಂತ್, ಪೂರ್ಣಿಮಾ, ಲಯನ್ ಗೋಲ್ಡನ್ ಸುರೇಶ್, ಮಂಜುಳ, ಶೆಟ್ಟಹಳ್ಳಿ ಸುರೇಶ್ ಸೇರಿದಂತೆ ಇತರರು ಅಭಿನಯಿಸುತ್ತಿದ್ದಾರೆ.
ಈ ವೇಳೆ ಲಯನ್ ಎನ್.ಸರಸ್ವತಿ , ಚಂದಗಾಲು ಶಂಕರ್, ಪತ್ರಕರ್ತ ಜಯಪಂಡಿತ್ ಆರಾಧ್ಯ, ಸುರೇಶ್, ಮಹೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.