ಸಾರಾಂಶ
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟನೆ
ಕನ್ನಡಪ್ರಭ ಸಿನಿವಾರ್ತೆ
ನಾನಿ ನಟನೆಯ ‘ದಸರಾ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದ ದೀಕ್ಷಿತ್ ಶೆಟ್ಟಿ ನಟನೆಯ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ದೀಕ್ಷಿತ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಪೋಸ್ಟ್ ರಿಲೀಸ್ ಮಾಡಿದೆ. ‘ರಂಗಿ ತರಂಗ’ ಚಿತ್ರ ನಿರ್ಮಿಸಿದ್ದ ಹೆಚ್. ಕೆ ಪ್ರಕಾಶ್ ನಿರ್ಮಾಣದ ಸಿನಿಮಾ ಇದು. ಈ ಹಾಸ್ಯ ಪ್ರಧಾನ ಚಿತ್ರವನ್ನು ಅಭಿಷೇಕ್ ಎಂ ನಿರ್ದೇಶಿಸಿದ್ದಾರೆ. ಬ್ಯಾಂಕ್ ಒಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಸಾಗುವ ಕಥೆ ಈ ಚಿತ್ರದ್ದು. ಬೃಂದಾ ಆಚಾರ್ಯ ನಾಯಕಿ. ಶ್ರೀ ವತ್ಸ, ಶ್ರೇಯಸ್ ಶರ್ಮಾ, ವಿನುತ ನಟಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.