ದ್ವಂದ್ವಂ ದ್ವಯಂ ಕಿರುಚಿತ್ರ ಬಿಡುಗಡೆ

| Published : Mar 22 2024, 01:00 AM IST

ಸಾರಾಂಶ

ಮನುಷ್ಯನ ಭಾವನೆಗಳ ಬಗೆಗಿನ ದ್ವಂದ್ವಂ ದ್ವಯಂ ಕಿರುಚಿತ್ರ ಅನಾವರಣಗೊಂಡಿದೆ.

ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್‌ ಸ್ಕೂಲ್‌ ಆಫ್‌ ಸಿನಿಮಾದಲ್ಲಿ ಕಾರ್ಯಾಗಾರ ನಿರ್ದೇಶಕರಾಗಿ ಕೆಲಸ ಮಾಡುವ ಮನ್ ಚಂಗಪ್ಪ ಇದೀಗ ‘ದ್ವಂದ್ವಂ ದ್ವಯಂ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದಾರೆ.ಈ ಕಿರುಚಿತ್ರದ ಬಿಡುಗಡೆ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಮನ್‌ ಚೆಂಗಪ್ಪ, ‘ಮರಣದಂಡನೆಗೂ ಮುನ್ನ ಖೈದಿಯೊಬ್ಬನ ಕೊನೆಯ ರಾತ್ರಿಯ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಚಿತ್ರವಿದು. 17 ನಿಮಿಷಗಳ ಅವಧಿಯಲ್ಲಿ ಮಾನವ ಬದುಕಿನ ಸಂಕೀರ್ಣತೆಗಳನ್ನು ಆಳವಾಗಿ ಪರಿಶೋಧಿಸುವ ಪ್ರಯತ್ನವನ್ನು ಈ ಕಿರುಚಿತ್ರ ಮಾಡುತ್ತದೆ. ನಮ್ಮೆಲ್ಲರೊಳಗಿನ ಜೀವನ ಹಾಗೂ ಆಯ್ಕೆಗಳ ಅನ್ವೇಷಣೆಯೇ ಈ ದ್ವಂದ್ವಂ ದ್ವಯಂ’ ಎಂದರು. ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಅನೂಪ್ ಭಂಡಾರಿ, ಚಂಪಾ ಶೆಟ್ಟಿ, ಅಶೋಕ್ ಕಶ್ಯಪ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಿರುಚಿತ್ರಕ್ಕೆ ಸಂಭಾಷಣೆ ಬರೆದ ನಾದಾ ಶೆಟ್ಟಿ ಉಪಸ್ಥಿತರಿದ್ದರು. ಹರ್ಷಿಕಾ ವಸಂತ್ ಈ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ವಿಕಾಶ್ ಉತ್ತಯ್ಯ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಸೂರ್ಯ ಹಾಗೂ ಸುಮೋಕ್ಷ ನಟಿಸಿದ್ದಾರೆ. ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಶನ, ರಾಜಾರಾವ್ ಅಂಚಲ್ಕರ್ ಛಾಯಾಗ್ರಹಣ, ಉದಯ್ ಕುಮಾರ್ ಸಂಕಲನವಿದೆ.