ಸಾರಾಂಶ
ನಟಿ ರಚಿತಾ ರಾಮ್ ಇದೇ ಮೊದಲ ಬಾರಿಗೆ ತಮ್ಮ ಮನೆ ಮುಂದೆ ಅಭಿಮಾನಿಗಳ ಜೊತೆಗೆ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬ ಆಚರಿಸಿದ ಬಳಿಕ ಅವರು ಹೇಳಿದ ಮಾತುಗಳು ಇಲ್ಲಿವೆ:
ಸಿನಿವಾರ್ತೆ
1. ಎರಡು ವರ್ಷಗಳಿಂದ ನಾನು ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ನನ್ನ ಇಷ್ಟಪಡುವವರು, ಅಭಿಮಾನಿಸುವವರ ಜೊತೆಗೆ ಸಂಭ್ರಮ ಹಂಚಿಕೊಳ್ಳಬೇಕು ಅನಿಸಿತು. ಈ ಕಾರಣಕ್ಕೆ ಈ ಬಾರಿ ಹುಟ್ಟುಹಬ್ಬಆಚರಿಸಿಕೊಂಡೆ.
2. ಕೂಲಿ ಚಿತ್ರದಲ್ಲಿ ನನ್ನ ಪಾತ್ರ ನೋಡಿದ ಮೇಲೆ ಸ್ವತಃ ರಜನಿಕಾಂತ್ ಅವರೇ ಫೋನ್ ಮಾಡಿ ವಿಶ್ ಮಾಡಿದ್ದು ನನಗೆ ಸಿಕ್ಕ ಬೆಸ್ಟ್ ಗಿಫ್ಟ್. ಅವರ ಮಾತುಗಳಿಂದ ನನಗೆ ತುಂಬಾ ಖುಷಿ ಆಗಿದೆ.
3. ಕೂಲಿ ಚಿತ್ರದ ನಂತರ ಬೇರೆ ಭಾಷೆಗಳಲ್ಲಿ ತುಂಬಾ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆದರೆ, ಬಹುತೇಕ ನೆಗೆಟೀವ್ ಪಾತ್ರಗಳೇ ಬರುತ್ತಿವೆ.
4. ನಿರ್ದೇಶಕ ಲೋಕೇಶ್ ಕನಗರಾಜ್ ಹೀರೋ ಆಗಿ ನಟಿಸುತ್ತಿರುವ ಚಿತ್ರದಲ್ಲಿ ನಾನು ನಟಿಸುತ್ತೇನೆ ಎನ್ನುವ ಸುದ್ದಿ ನಿಜ. ಹೆಚ್ಚಿನ ಮಾಹಿತಿಗಳು ಮುಂದೆ ಹೇಳುತ್ತೇವೆ.
5. ದುನಿಯಾ ವಿಜಯ್ ಜೊತೆಗೆ ನಟಿಸಿರುವ ಲ್ಯಾಂಡ್ ಲಾರ್ಡ್ ಚಿತ್ರ ಸಿಗುವುದಕ್ಕೆ ದರ್ಶನ್ ಕಾರಣ. ಈ ಚಿತ್ರದ ಕತೆ ಬಗ್ಗೆ ದರ್ಶನ್ ಅವರೊಂದಿಗೆ ಮಾತನಾಡುವಾಗ, ಕತೆ ಚೆನ್ನಾಗಿದೆ, ಪಾತ್ರ ಕೂಡ ಚೆನ್ನಾಗಿರುತ್ತದೆ, ಒಪ್ಪಿಕೋ ಅಂತ ಹೇಳಿದರು. ಅವರು ಹೇಳಿದ್ದರಿಂದ ಒಪ್ಪಿಕೊಂಡೆ.
6. ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ನಾನು ದುನಿಯಾ ವಿಜಯ್ ಪುತ್ರಿಯ ತಾಯಿ ಪಾತ್ರದಲ್ಲಿ ನಟಿಸಿದ್ದೇನೆ. ಪಾತ್ರ ತುಂಬಾ ರಗ್ಡ್ ಆಗಿರುತ್ತದೆ. ಇದುವರೆಗೂ ನೋಡದಿರುವ ಪಾತ್ರದಲ್ಲಿ ನನ್ನ ನೋಡುತ್ತೀರಿ.
7. ನಾನು ರಾಜಕೀಯಕ್ಕೆ ಬರಲ್ಲ. ನನಗೂ ರಾಜಕೀಯಕ್ಕೆ ಆಗಿಬರಲ್ಲ. ಚಿತ್ರರಂಗದಲ್ಲೇ ಬ್ಯುಸಿಯಾಗಿದ್ದೇನೆ. ಹೀಗಾಗಿ ನಾನು ರಾಜಕೀಯಕ್ಕೆ ಬರುತ್ತೇನೆ ಎನ್ನುವುದು ದೂರದ ಮಾತು.
8. ಸದ್ಯದಲ್ಲೇ ನಾನು ಮದುವೆ ಆಗಲಿದ್ದೇನೆ. ಮನೆಯಲ್ಲಿ ಹುಡುಗನನ್ನು ನೋಡುತ್ತಿದ್ದಾರೆ. ಲವ್ ಮ್ಯಾರೇಜ್ ಅಲ್ಲ. ಪಕ್ಕಾ ಅರೆಂಜ್ ಮ್ಯಾರೇಜ್. ಈಗ ಮೂಗು ಚುಚ್ಚಿಸಿಕೊಂಡಿರುವುದಕ್ಕೂ ಮದುವೆ ಆಗುವ ಸುದ್ದಿಗೂ ಸಂಬಂಧವಿಲ್ಲ.