ಕನ್ನಡ ನಿರ್ಮಾಪಕ ರಮೇಶ್‌ ರೆಡ್ಡಿ ನಿರ್ಮಾಣದ ಹಿಂದಿ ಸಿನಿಮಾ ಘುಸ್ಪೈಥಿಯಾ ಟ್ರೇಲರ್ ಬಿಡುಗಡೆ

| Published : Jul 29 2024, 12:51 AM IST / Updated: Jul 29 2024, 05:04 AM IST

ಸಾರಾಂಶ

ಕನ್ನಡ ನಿರ್ಮಾಪಕ ರಮೇಶ್ ರೆಡ್ಡಿ ನಿರ್ಮಾಣದ ಹಿಂದಿ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಸದ್ಯದಲ್ಲೇ ಸಿನಿಮಾ ಕೂಡ ಚಿತ್ರಮಂದಿರಗಳಿಗೆ ಬರಲಿದೆ.

  ಸಿನಿವಾರ್ತೆ

ಕನ್ನಡದ ಖ್ಯಾತ ನಿರ್ಮಾಪಕ ರಮೇಶ್‌ ರೆಡ್ಡಿ ನಿರ್ಮಾಣ ಮಾಡಿರುವ ಹಿಂದಿ ಸಿನಿಮಾ ‘ಘುಸ್ಪೈಥಿಯಾ’ ಆಗಸ್ಟ್‌ 9ರಂದು ಬಿಡುಗಡೆ ಆಗುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಸೈಬರ್‌​ ಕ್ರೈಂ ಕತೆಯನ್ನು ಒಳಗೊಂಡ ಈ ಚಿತ್ರವನ್ನು ಸುಸಿ ಗಣೇಶನ್‌ ನಿರ್ದೇಶಿದ್ದಾರೆ.

ರಮೇಶ್‌ ರೆಡ್ಡಿ, ‘ನಮ್ಮ ಚಿತ್ರವನ್ನು ಎಎ ಫಿಲಂಸ್‌ ವಿತರಣೆ ಮಾಡುತ್ತಿದೆ. ಮುಂದೆ ಕೂಡ ಒಳ್ಳೆಯ ಚಿತ್ರಗಳನ್ನು ನಿರ್ಮಿಸುತ್ತೇನೆ’ ಎಂದು ಹೇಳಿದ್ದಾರೆ.

ವಿನೀತ್‌ಕುಮಾರ್‌ ಸಿಂಗ್‌, ಊರ್ವಶಿ ರೌಟೇಲ, ಅಕ್ಷಯ್‌ ಒಬೆರಾಯ್‌ ಚಿತ್ರದಲ್ಲಿ ನಟಿಸಿದ್ದಾರೆ. ಜ್ಯೋತಿಕ ಶೆಣೈ ಹಾಗೂ ಮಂಜರಿ ಸುಸಿ ಗಣೇಶನ್ ನಿರ್ಮಾಣಕ್ಕೆ ಸಾಥ್‌ ನೀಡಿದ್ದಾರೆ.