ಸಾರಾಂಶ
ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತು ಯುವತಿಯೊಬ್ಬಳು ಸೊಲೊ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಅದಕ್ಕೆ 15 ಲಕ್ಷ ಲೈಕ್ಸ್ ಬಂದು ಭಾರೀ ಕಾಮೆಂಟ್‌ಗಳು ವ್ಯಕ್ತವಾಗಿವೆ.
ರಸ್ತೆ ದಾಟುವಾಗ ನಾವೆಲ್ಲರೂ ಸಿಗ್ನಲ್ ಬೀಳುವುದರೊಳಗೆ ಇನ್ನೊಂದು ಬದಿ ತಲುಪುವ ಧಾವಂತದಲ್ಲಿರುತ್ತೇವೆ. ಆದರೆ ಇಲ್ಲೊಬ್ಬಳು ಯುವತಿ ರಸ್ತೆಯಲ್ಲಿ ಸಿಗ್ನಲ್ ಬಿದ್ದಾಗ ರಸ್ತೆ ಮಧ್ಯೆ ನಿಂತು ಡಾನ್ಸ್ ಮಾಡಿದ್ದಾಳೆ. ಇದನ್ನು ವಿಡಿಯೋ ಮಾಡುತ್ತಿರುವುದನ್ನು ಕಂಡರೂ ಸಹ ಒಂದು ಸ್ವಲ್ಪವೂ ಹಿಂಜರಿಕೆಯಿಲ್ಲದೇ ಈಕೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. 23 ಸೆಕೆಂಡ್ ಇರುವ ಈ ದೃಶ್ಯಾವಳಿಗೆ ಬರೋಬ್ಬರಿ 15 ಲಕ್ಷ ಲೈಕ್ಸ್ ಬಂದಿವೆ. ಈಕೆಯ ಡಾನ್ಸ್ ಪರ್ಫಾರ್ಮೆನ್ಸ್‌ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಹಾಕಿದ್ದಾರೆ.