ಸಾರಾಂಶ
ಕುಂದಾಪುರದ ಕೆರಾಡಿಯ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದ ರಿಷಬ್ ಶೆಟ್ಟಿ.
ಕನ್ನಡಪ್ರಭ ಸಿನಿವಾರ್ತೆಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ತನ್ನ ಊರಾದ ಕುಂದಾಪುರ ಕೆರಾಡಿಯ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದಿದ್ದಾರೆ. ಈ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಮೂಲಕ ರಿಷಬ್ ಕನ್ನಡ ಶಾಲೆ ಉಳಿಸುವ ಮಹತ್ವವನ್ನು ಸಾರಿದ್ದರು. ಇದೀಗ ಅವರೇ ಸ್ವತಃ ರಿಷಬ್ ಶೆಟ್ಟಿ ಫೌಂಡೇಶನ್ ಮೂಲಕ ಕೆರಾಡಿ ಶಾಲೆ ದತ್ತು ಪಡೆಯುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಕೆಲಸ ಮಾಡಿದ್ದಾರೆ. ಊರ ಹಿರಿಯರು, ಪ್ರಮುಖರ ಉಪಸ್ಥಿತಿಯಲ್ಲಿ ರಿಷಬ್ ಶೆಟ್ಟಿ ಶಾಲೆಯನ್ನು ಉಳಿಸಿ ಬೆಳೆಸುವ ತನ್ನ ಕನಸನ್ನು ಹಂಚಿಕೊಂಡರು. ಅಲ್ಲಿ ನೆರೆದ ಸಮಸ್ತರು ರಿಷಬ್ ಶೆಟ್ಟಿ ಅವರನ್ನು ಅಭಿನಂದಿಸಿದರು.