ಸಾರಾಂಶ
‘ತ್ರಿದೇವಿ ಪೊನ್ನಕ್ಕ!’
ಇದು ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಅವರ ಮಗಳ ಹೆಸರು.
ಸಿನಿವಾರ್ತೆ
‘ತ್ರಿದೇವಿ ಪೊನ್ನಕ್ಕ!’
ಇದು ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಅವರ ಮಗಳ ಹೆಸರು. ನವರಾತ್ರಿಯ ಮೊದಲ ದಿನ ಜನಿಸಿದ ಮಗಳಿಗೆ ತಾರಾ ದಂಪತಿ ದೇವಿಯ ಹೆಸರನ್ನೇ ಇಟ್ಟಿದ್ದಾರೆ. ಸರಸ್ವತೀ, ಲಕ್ಷ್ಮೀ ಹಾಗೂ ಪಾರ್ವತಿ ಈ ಮೂರು ದೇವಿಯರನ್ನು ಸೂಚಿಸುವ ಹೆಸರಿದು.
ಕೊಡಗಿನ ವಿರಾಜಪೇಟೆಯಲ್ಲಿ ನಾಮಕರಣ ಸಮಾರಂಭ ಅದ್ದೂರಿಯಾಗಿ ನಡೆದಿದೆ. ಸ್ಯಾಂಡಲ್‌ವುಡ್‌ನ ತಾರೆಯರು ಸಮಾರಂಭದಲ್ಲಿ ಭಾಗಿಯಾಗಿ ಪುಟ್ಟ ಮಗುವಿಗೆ ಶುಭ ಹಾರೈಸಿದ್ದಾರೆ.
ನಟಿ ಅಮೂಲ್ಯ ಡ್ಯಾನ್ಸ್ ಮಾಡಿ ಸಂಭ್ರಮಿಸಿದರೆ, ಪೂಜಾಗಾಂಧಿ ಶುಭ ಕೋರಿದ್ದಾರೆ. ನಿರ್ದೇಶಕಿ ಸುಮನಾ ಕಿತ್ತೂರು, ಕಲಾವಿದರಾದ ವಿಕಾಶ್ ಉತ್ತಯ್ಯ, ಕಾರುಣ್ಯ ರಾಮ್, ಜಾನ್ವಿ ರಾಯಲ ಮೊದಲಾದವರು ಪಾಲ್ಗೊಂಡಿದ್ದಾರೆ.