ಸಾರಾಂಶ
ಮನೇಲಿ ಬಿರಿಯಾನಿ ಓಪನ್ ಮಾಡಿ ನೋಡಿದ್ರೆ ಪೀಸೇ ಇರಲಿಲ್ಲವಂತೆ. ಬಳಿಕ ಅವರು ಹೋಟೆಲ್‌ಗೆ ಸರಿಯಾಗಿ ಪಾಠ ಕಲಿಸುವ ಅಂತಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ದುಡ್ಡು ಕೊಟ್ಟು ಚಿಕನ್ ಬಿರಿಯಾನಿ ತಿನ್ನೋಕೆ ಹೋದಾಗ ಬಿರಿಯಾನಿಯಲ್ಲಿ ಪೀಸೇ ಇಲ್ಲದಿದ್ದರೆ ಮನಸ್ಸಿಗೆ ಎಷ್ಟು ಸಂಕಟವಾಗುತ್ತೆ ಅನ್ನೋದು ಅನುಭವಿಸಿದವರಿಗೇ ಗೊತ್ತು ಬಿಡಿ. ಅಂದ ಹಾಗೆ ಇಲ್ಲಿ ಆಗಿದ್ದು ಇಷ್ಟೆ. ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿತ್ತು ಎಂಬ ಕಾರಣಕ್ಕೆ ಬೆಂಗಳೂರಿನ ನಿವಾಸಿ ಕೃಷ್ಣಪ್ಪ ಎಂಬುವವರು ಐಟಿಐ ಲೇಔಟ್‌ನಲ್ಲಿರುವ ಹೋಟೆಲ್ ಪ್ರಶಾಂತ್‌ಗೆ ಹೋಗಿ 150 ರು. ಕೊಟ್ಟು ಬಿರಿಯಾನಿ ಪಾರ್ಸಲ್ ತಗೊಂಡು ಬಂದಿದ್ದರಂತೆ. ಮನೇಲಿ ಬಿರಿಯಾನಿ ಓಪನ್ ಮಾಡಿ ನೋಡಿದ್ರೆ ಪೀಸೇ ಇರಲಿಲ್ಲವಂತೆ. ಬಳಿಕ ಅವರು ಹೋಟೆಲ್‌ಗೆ ಸರಿಯಾಗಿ ಪಾಠ ಕಲಿಸುವ ಅಂತಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಸಾಕ್ಷಿಗೆಂದು ಬಿರಿಯಾನಿ ಫೋಟೋನೆ ನೀಡಿದ್ದರಂತೆ ಬಳಿಕ ಕೋರ್ಟ್ ಹೋಟೆಲ್‌ಗೆ 1,000 ಪರಿಹಾರ ಮತ್ತು 150 ರು. ನೀಡುವಂತೆ ಆದೇಶಿಸಿದೆ.