ಸಾರಾಂಶ
ಹೊಂಬಾಳೆ ಫಿಲಂಸ್ ಜೊತೆ ಬಾಲಿವುಡ್ ನಟ ಹೃತಿಕ್ ರೋಷನ್ ಕೈ ಜೋಡಿಸಿದ್ದಾರೆ. ಇವರ ಕಾಂಬಿನೇಷನ್‌ನಲ್ಲಿ ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾ ಸಿದ್ಧಗೊಳ್ಳುತ್ತಿದೆ.
ಸಿನಿವಾರ್ತೆ
ಹೊಂಬಾಳೆ ಫಿಲಂಸ್ ಜೊತೆ ಬಾಲಿವುಡ್ ನಟ ಹೃತಿಕ್ ರೋಷನ್ ಕೈ ಜೋಡಿಸಿದ್ದಾರೆ. ಇವರ ಕಾಂಬಿನೇಷನ್‌ನಲ್ಲಿ ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾ ಸಿದ್ಧಗೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ‘ಮಹಾಸ್ಫೋಟವೊಂದಕ್ಕೆ ಸಿದ್ಧವಾಗಿರಿ’ ಎಂಬ ಸಂದೇಶವನ್ನು ಸಿನಿಮಾ ಟೀಮ್ ನೀಡಿದೆ.
ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಈ ಕುರಿತ ಪ್ರಕಟಣೆ ಹೊರಡಿಸಿದ್ದು, ಹೃತಿಕ್ ಫ್ಯಾನ್ಸ್ ವಲಯದಲ್ಲಿ ಸಂಭ್ರಮ ಹೆಚ್ಚಾಗಿದೆ.
ಈ ಬಗ್ಗೆ ವಿವರ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರ್, ‘ದೊಡ್ಡ ಸಾಹಸಕ್ಕೆ ಕೈ ಹಾಕಿದ್ದೇವೆ. ಈ ಸಹಭಾಗಿತ್ವ ಸಂತೋಷ ನೀಡಿದೆ. ಮೊದಲಿಂದಲೂ ಸ್ಫೂರ್ತಿ ನೀಡುವ ಮತ್ತು ಗಡಿಗಳ ಹಂಗನ್ನು ಮೀರಿದ ಕಥೆಗಳನ್ನು ಹೇಳುತ್ತ ಬಂದಿದ್ದೇವೆ. ಹೃತಿಕ್ ರೋಷನ್ ಜೊತೆಗಿನ ಪಾಲುದಾರಿಕೆಯು ನಮ್ಮ ದೃಷ್ಟಿಕೋನವನ್ನು ವಿಸ್ತರಿಸುವಲ್ಲಿ ಒಂದು ಹೆಜ್ಜೆ ಮುಂದಿದೆ. ಕಲ್ಪನೆಯನ್ನೂ ಮೀರಿಸುವ ತೀವ್ರತೆಯಲ್ಲಿ ಕಾಲಾತೀತ ಅನುಭವವಾಗಿ ಸಿನಿಮಾ ಹೊರಹೊಮ್ಮಲಿದೆ’ ಎಂದಿದ್ದಾರೆ.
ನಟ ಹೃತಿಕ್, ‘ಹೊಂಬಾಳೆ ಫಿಲಂಸ್ ಹಲವು ವರ್ಷಗಳಿಂದ ವಿಶಿಷ್ಟ ಕಥೆಗಳಿಗೆ ನೆಲೆಯಾಗಿದೆ. ಅವರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಮತ್ತು ನಮ್ಮ ಪ್ರೇಕ್ಷಕರಿಗೆ ರೋಮಾಂಚಕ ಸಿನಿಮೀಯ ಅನುಭವವನ್ನು ನೀಡಲು ನಾನು ಎದುರು ನೋಡುತ್ತಿದ್ದೇನೆ. ನಾವು ದೊಡ್ಡ ಕನಸು ಕಾಣುತ್ತಿದ್ದೇವೆ’ ಎಂದಿದ್ದಾರೆ.