ಜ.8ಕ್ಕೆ ಯುಐ ಟೀಸರ್‌ ಬಿಡುಗಡೆ

| Published : Jan 06 2024, 02:00 AM IST

ಸಾರಾಂಶ

ಇದೇ ತಿಂಗಳು 8ರಂದು ಅದ್ದೂರಿಯಾಗಿ ಯುಐ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಈ ನಿಟ್ಟಿನಲ್ಲಿ ಚಿತ್ರದ ನಾಯಕ ಮತ್ತು ನಿರ್ದೇಶಕ ಉಪೇಂದ್ರ ಅವರು ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆ

ಉಪೇಂದ್ರ ನಟನೆ ಹಾಗೂ ನಿರ್ದೇಶನದ ‘ಯುಐ’ ಚಿತ್ರದ ಟೀಸರ್‌ ಜ.8ರಂದು ಬಿಡುಗಡೆ ಆಗುತ್ತಿದೆ. ಅದ್ದೂರಿ ಕಾರ್ಯಕ್ರಮದ ಮೂಲಕ ಟೀಸರ್‌ ಅನಾವರಣಗೊಳ್ಳುತ್ತಿದೆ. ಟೀಸರ್‌ ಈವೆಂಟ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಈಗಾಗಲೇ ಲಕ್ಕಿ ಡ್ರಾ ಮೂಲಕ ಆಯ್ಕೆ ಆಗಿರುವ ಅಭಿಮಾನಿಗಳಿಗೆ ಪಾಸ್‌ಗಳನ್ನು ನೀಡಲಾಗುತ್ತಿದೆ. ‘ದಿ ವರ್ಲ್ಡ್‌ ಆಫ್‌ ಯುಐ’ ಹೆಸರಿನಲ್ಲಿ ಟೀಸರ್‌ ಬಿಡುಗಡೆ ಆಗುತ್ತಿದೆ. ಲಹರಿ ಫಿಲಂಸ್‌ ಹಾಗೂ ವೀನಸ್‌ ಎಂಟರ್‌ಟೇನರ್ಸ್‌ ಮೂಲಕ ಈ ಚಿತ್ರವನ್ನು ನಿರ್ಮಿಸಲಾಗಿದೆ.