ಅಪ್ಪನ ತ್ಯಾಗ, ಮಗನ ಸಾಹಸ

| N/A | Published : Jul 20 2025, 01:22 AM IST / Updated: Jul 20 2025, 08:32 AM IST

junior movie

ಸಾರಾಂಶ

ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಜೂನಿಯರ್ ಚಿತ್ರ ಹೇಗಿದೆ?

ಚಿತ್ರ: ಜೂನಿಯರ್

ತಾರಾಗಣ: ಕಿರೀಟಿ ರೆಡ್ಡಿ, ರವಿಚಂದ್ರನ್, ಅಚ್ಯುತ್ ಕುಮಾರ್‌, ರಾವ್‌ ರಮೇಶ್‌, ಜೆನಿಲಿಯಾ, ಕಿರಣ್‌ ಶ್ರೀನಿವಾಸ್‌, ಶ್ರೀಲೀಲಾ

ನಿರ್ದೇಶನ: ರಾಧಾಕೃಷ್ಣ ರೆಡ್ಡಿ

ರೇಟಿಂಗ್‌: 3

ಆರ್‌.ಕೇಶವಮೂರ್ತಿ

ಒಂದು ಕಂಪ್ಲೀಟ್ ಕ್ಲಾರಿಟಿ ಹಾಗೂ ಕ್ವಾಲಿಟಿ ಇರೋ ಸಿನಿಮಾ. ಚಿತ್ರರಂಗಕ್ಕೆ ಪ್ರವೇಶಿಸುವ ನಟನೊಬ್ಬನ ಮೊದಲ ಹೆಜ್ಜೆ ಮತ್ತು ಮೊದಲ ಆಯ್ಕೆ ಹೇಗಿರಬೇಕು ಎಂಬುದಕ್ಕೆ ‘ಜೂನಿಯರ್‌’ ಚಿತ್ರದ ಮೂಲಕ ಒಂದು ಎಕ್ಸಾಂಪಲ್‌ ಸೆಟ್‌ ಮಾಡಿದ್ದಾರೆ ನಿರ್ದೇಶಕ ರಾಧಾಕೃಷ್ಣ ರೆಡ್ಡಿ. ಫ್ಯಾಮಿಲಿ ಸೆಂಟಿಮೆಂಟ್‌, ತಂದೆ-ಮಗನ ಬಾಂಧವ್ಯ, ಅಕ್ಕನ ಎಮೋಷನ್‌, ಅಪ್ಪನ ತ್ಯಾಗ, ಇದೆಲ್ಲದರ ಜೊತೆಗೆ ಬಿಸಿ ರಕ್ತದ ಹುಡುಗನ ಸಾಹಸ ಮತ್ತು ಕನಸುಗಳು.... ಇಷ್ಟೂ ಅಂಶಗಳು ರುಚಿ ತಕ್ಕಷ್ಟು ಸಿನಿಮಾದೊಳಗೆ ಜಾಗ ಪಡೆದುಕೊಂಡು ಕತೆಯಾಗಿ ಪ್ರೇಕ್ಷಕನ ಮುಂದೆ ತೆರೆದುಕೊಳ್ಳುತ್ತದೆ.

ತಂದೆ-ಮಗನ ಕತೆಯಾಗಿ ಶುರುವಾಗಿ ಜನರೇಷನ್‌ ಗ್ಯಾಪ್‌ ನುಸುಳುತ್ತದೆ. ಪೋಷಕರು ಮತ್ತು ಮಕ್ಕಳ ನಡುವಿನ ಅಂತರ ಮತ್ತು ಆಲೋಚನೆಗಳಲ್ಲಿರುವ ವ್ಯತ್ಯಾಸಗಳನ್ನು ಹೇಳುತ್ತಿದ್ದಾರೆ ಎಂದುಕೊಂಡರೆ ತಂದೆಯೊಬ್ಬನ ಅಸಹಾಯಕತೆ ಮತ್ತು ಅನಿವಾರ್ಯತೆಗೆ ತ್ಯಾಗದ ಭಾವುಕ ನೆರಳು ಬಂದು ಎಚ್ಚರಿಸುತ್ತದೆ.

ಒಂದಿಷ್ಟು ತಿರುವುಗಳು, ಅಚ್ಚರಿಗಳನ್ನು ಹೇಳುತ್ತಲೇ ಸಾಗುವ ‘ಜೂನಿಯರ್‌’, ವಿಜಯಾ, ಅಭಿ, ಕೋದಂಡಪಾಣಿ ಎಂಬ ಮೂರು ಪಾತ್ರಗಳನ್ನು ನೆನಪಿಲ್ಲಿ ಉಳಿಸಿಬಿಡುತ್ತದೆ. ಈ ಸಿನಿಮಾದಲ್ಲಿ ಸಕಲ ತಯಾರಿ ಮಾಡಿಕೊಂಡು ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿರುವ ಕಿರೀಟಿ ರೆಡ್ಡಿಯ ಶ್ರಮ, ಪ್ರತಿಭೆ ಮಾತ್ರ ಕಾಣುತ್ತದೆ.

ಕಿರೀಟಿ ರೆಡ್ಡಿ ಸಿನಿಮಾವನ್ನು ತನ್ನ ಲೆವಲ್ಲಿಗೆ ಏರಿಸಿಕೊಂಡಿಲ್ಲ, ತಾನೇ ಸಿನಿಮಾ ಲೆವಲ್ಲಿಗೆ ಇಳಿದಿದ್ದಾರೆ. ಡ್ಯಾನ್ಸ್‌, ಫೈಟ್‌, ಡೈಲಾಗ್‌ ಡೆಲಿವರಿ, ಸ್ಕ್ರೀನ್‌ ಅಪಿಯರೆನ್ಸ್‌ನಲ್ಲಿ ಕಿರೀಟಿ ರೆಡ್ಡಿ ‘ಜೂನಿಯರ್‌’ ಅಲ್ಲ. ತಂದೆಯ ಪಾತ್ರದಲ್ಲಿ ರವಿಚಂದ್ರನ್‌ ಸೀನಿಯರ್‌ ಎನಿಸಿಕೊಂಡರೆ, ಅಕ್ಕನ ಪಾತ್ರದಲ್ಲಿ ಜೆನಿಲಿಯಾ ನಟನೆ ಮೆಚ್ಚುವಂತಹುದು. ಶ್ರೀಲೀಲಾ ಚಿತ್ರದ ನಾಯಕಿ ಎನ್ನುವುದಕ್ಕಿಂತ ಅತಿಥಿ ಪಾತ್ರಧಾರಿ ಎನ್ನಬಹುದು. ಪರಿಚಿತ ಕನ್ನಡ ಧ್ವನಿಗಳು ಅಪರಿಚಿತ ತೆಲುಗು ನಟರಿಗೆ ಡಬ್‌ ಮಾಡಿರುವುದರಿಂದ ಆ ಪಾತ್ರಧಾರಿಗಳು ಪ್ರೇಕ್ಷಕನಿಗೆ ಅಷ್ಟಾಗಿ ಕನೆಕ್ಟ್‌ ಆಗಲ್ಲ. ಫ್ಯಾಮಿಲಿ, ಯೂತ್‌ಫುಲ್‌ ಸಿನಿಮಾ ನೋಡಬಯಸುವವರಿಗೆ ಈ ಸಿನಿಮಾ ರುಚಿಸುತ್ತದೆ.

Read more Articles on