ಇಲ್ಲಿ ಗರ್ಭಿಣಿಯರು ಕಾಣೆಯಾಗುತ್ತಾರೆ!

| N/A | Published : Aug 30 2025, 01:57 PM IST

Usiru
ಇಲ್ಲಿ ಗರ್ಭಿಣಿಯರು ಕಾಣೆಯಾಗುತ್ತಾರೆ!
Share this Article
  • FB
  • TW
  • Linkdin
  • Email

ಸಾರಾಂಶ

ಆತ ಬೇಜವಾಬ್ದಾರಿ ಪೊಲೀಸ್‌. ತನ್ನ ಗರ್ಭಿಣಿ ಪತ್ನಿಗೆ ಅನಾಮಿಕನೊಬ್ಬನಿಂದ ಪ್ರಾಣಕ್ಕೆ ಅಪಾಯ ಇದೆ ಎನ್ನುವ ಮಾಹಿತಿ ಗೊತ್ತಾದ ಮೇಲೆ ಆ ಬೇಜವಾಬ್ದಾರಿ ಪೊಲೀಸ್‌ ಅಧಿಕಾರಿಯ ಮುಂದಿನ ನಡೆ ಏನು ಎಂಬುದನ್ನು ಹೇಳುತ್ತಲೇ ಒಂದು ಸೈಕೋ ಥ್ರಿಲ್ಲರ್‌ ಕತೆಯನ್ನು ಪ್ರೇಕ್ಷಕರ ಮುಂದಿಡುತ್ತದೆ ‘ಉಸಿರು’ ಸಿನಿಮಾ

ಚಿತ್ರ: ಉಸಿರು

ತಾರಾಗಣ: ತಿಲಕ್, ಪ್ರಿಯಾ ಹೆಗ್ಡೆ, ಸಂತೋಷ್‌, ಅರುಣ್‌, ಅಪೂರ್ವ, ರಘು ರಮಣಕೊಪ್ಪ

ನಿರ್ದೇಶನ: ಪನೇಮ್ ಪ್ರಭಾಕರ್

ರೇಟಿಂಗ್ : 3

ಆರ್‌. ಕೇಶವಮೂರ್ತಿ

ಆತ ಬೇಜವಾಬ್ದಾರಿ ಪೊಲೀಸ್‌. ತನ್ನ ಗರ್ಭಿಣಿ ಪತ್ನಿಗೆ ಅನಾಮಿಕನೊಬ್ಬನಿಂದ ಪ್ರಾಣಕ್ಕೆ ಅಪಾಯ ಇದೆ ಎನ್ನುವ ಮಾಹಿತಿ ಗೊತ್ತಾದ ಮೇಲೆ ಆ ಬೇಜವಾಬ್ದಾರಿ ಪೊಲೀಸ್‌ ಅಧಿಕಾರಿಯ ಮುಂದಿನ ನಡೆ ಏನು ಎಂಬುದನ್ನು ಹೇಳುತ್ತಲೇ ಒಂದು ಸೈಕೋ ಥ್ರಿಲ್ಲರ್‌ ಕತೆಯನ್ನು ಪ್ರೇಕ್ಷಕರ ಮುಂದಿಡುತ್ತದೆ ‘ಉಸಿರು’ ಸಿನಿಮಾ. ಥ್ರಿಲ್ಲರ್ ಚಿತ್ರಕ್ಕೂ ಚಿತ್ರದ ಹೆಸರಿಗೂ ಏನು ಸಂಬಂಧ ಎಂದರೆ ಚಿತ್ರದಲ್ಲಿ ತಾಯಿಯ ಪ್ರೀತಿ ಇದೆ. ಇಡೀ ಕತೆ ಮಡಿಕೇರಿ ಪರಿಸರದ ಹಿನ್ನೆಲೆಯಲ್ಲಿ ಸಾಗುವುದರಿಂದ ಚಿತ್ರಕ್ಕೆ ಒಂದಿಷ್ಟು ರೋಚಕತೆ ಹಾಗೂ ಕುತೂಹಲ ನೆರಳು ಆವರಿಸಿಕೊಳ್ಳುತ್ತದೆ.

ತನ್ನ ತಾಯಿಯನ್ನು ಕಳೆದುಕೊಂಡಿರುವ ವ್ಯಕ್ತಿ ಅಮ್ಮನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆಯೇ ಎನ್ನುವುದರ ಜೊತೆಗೆ ಅಪಾಯದಲ್ಲಿರುವ ತನ್ನ ಪತ್ನಿಯನ್ನು ಪೊಲೀಸ್ ಅಧಿಕಾರಿ ಹೇಗೆ ರಕ್ಷಿಸಿಕೊಳ್ಳುತ್ತಾನೆ ಎನ್ನುವುದು ಕತೆಯ ಸಣ್ಣ ತಿರುಳು. ಇಲ್ಲಿ ಪೊಲೀಸ್‌ ಅಧಿಕಾರಿಯೊಬ್ಬನ ಬೇಜವಾಬ್ದಾರಿಯನ್ನು ಹೇಳುತ್ತಲೇ, ಅದೇ ಪೊಲೀಸ್‌ ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದನ್ನೂ ಕೂಡ ತೋರಿಸಿರುವುದು ಚಿತ್ರದ ಪ್ಲಸ್ ಪಾಯಿಂಟ್. ಇದರ ಜೊತೆಗೆ ತಾಯಿಯನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿ ಕ್ರೈಮ್ ಮಾಡಲು ಮುಂದಾದರೆ ಏನಾಗುತ್ತದೆ ಎನ್ನುವ ಎಳೆಯೂ ಇಲ್ಲಿದೆ.

ರಾಜೀವ್‌ ಮುತ್ತಣ್ಣ ಪಾತ್ರದಲ್ಲಿ ತಿಲಕ್‌, ಸೂರ್ಯ ಪಾತ್ರದಲ್ಲಿ ಸಂತೋಷ್‌ ಅವರು ಕಾಣಿಸಿಕೊಂಡಿದ್ದು ಈ ಇಬ್ಬರ ಮುಖಾಮುಖಿಯೇ ಚಿತ್ರದ ಹೈಲೈಟ್. ಹಿನ್ನೆಲೆ ಸಂಗೀತ ಮತ್ತು ಲೊಕೇಶನ್‌ಗಳು ಚಿತ್ರದ ಮತ್ತೊಂದು ಹೈಲೈಟ್‌. ಗರ್ಭಿಣಿ ಪಾತ್ರದಲ್ಲಿ ಪ್ರಿಯಾ ಹೆಗ್ಡೆ ಅವರದ್ದು ಕತೆಗೆ ಪೂರಕವಾದ ನಟನೆ.

 

Read more Articles on