ರಾಜ್ಯ ಸರ್ಕಾರದ 2021ನೇ ಕ್ಯಾಲೆಂಡರ್‌ ವರ್ಷದ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಹಾಗೂ ರಕ್ಷಿಶ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಬೆಂಗಳೂರು : ರಾಜ್ಯ ಸರ್ಕಾರದ 2021ನೇ ಕ್ಯಾಲೆಂಡರ್‌ ವರ್ಷದ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಹಾಗೂ ರಕ್ಷಿಶ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯಿಂದ ಪ್ರತಿ ವರ್ಷ ಪ್ರಕಟಿಸುವ ಪ್ರಶಸ್ತಿಗಳ ಪೈಕಿ 2021ನೇ ಸಾಲಿನ ಕ್ಯಾಲೆಂಡರ್‌ ವರ್ಷದ ಪ್ರಶಸ್ತಿ ಪ್ರಕಟಗೊಂಡಿರಲಿಲ್ಲ. ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅಧ್ಯಕ್ಷತೆಯ ಆಯ್ಕೆ ಸಲಹಾ ಸಮಿತಿ ಪಟ್ಟಿಯನ್ನು ಪುರಸ್ಕರಿಸಿ ಇಲಾಖೆ ಇದೀಗ ಪ್ರಶಸ್ತಿಗಳನ್ನು ಪ್ರಕಟಿಸಿದೆ.

58 ಚಲನಚಿತ್ರಗಳ ನಿರ್ಮಾಪಕರು ವಿವಿಧ ವಿಭಾಗಗಳ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಿದ್ದು, ತಾಂತ್ರಿಕ ಕಾರಣಗಳಿಗಾಗಿ 53 ಚಿತ್ರಗಳನ್ನು ವೀಕ್ಷಿಸಿ ತೀರ್ಪುಗಾರರು ಪ್ರಶಸ್ತಿಗಳಿಗೆ ಆಯ್ಕೆ ಮಾಡಿದ್ದಾರೆ.

ಅತ್ಯುತ್ತಮ ಚಿತ್ರ ಪ್ರಶಸ್ತಿಯಾಗಿ ‘ದೊಡ್ಡಹಟ್ಟಿ ಬೋರೇಗೌಡ’, ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ‘777 ಚಾರ್ಲಿ’, ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ‘ಬಿಸಿಲು ಕುದುರೆ’, ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಪ್ರಶಸ್ತಿಗೆ ‘ಭಾರತದ ಪ್ರಜೆಗಳಾದ ನಾವು’, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿ ‘ಯುವರತ್ನ’ ಸಿನಿಮಾ ಆಯ್ಕೆಯಾಗಿರುವುದಾಗಿ ಇಲಾಖೆ ತಿಳಿಸಿದೆ.

ಶ್ರೇಷ್ಠ ಸಿನಿಮಾ: ದೊಡ್ಡಹಟ್ಟಿ ಬೋರೇಗೌಡ

ಶ್ರೇಷ್ಠ ನಟ: ರಕ್ಷಿತ್‌ ಶೆಟ್ಟಿ

ಶ್ರೇಷ್ಠ ನಟಿ: ಅರ್ಚನಾ ಜೋಯಿಸ್‌

ಶ್ರೇಷ್ಠ ಪೋಷಕ ನಟ: ಪ್ರಮೋದ್‌

ಶ್ರೇಷ್ಠ ಪೋಷಕನಟಿ: ಉಮಾಶ್ರೀ

ಶ್ರೇಷ್ಠ ಸಂಭಾಷಣೆ: ಬರಗೂರು ರಾಮಚಂದ್ರಪ್ಪ

------

ಅತ್ಯುತ್ತಮ ಚಿತ್ರ:

1- ಮೊದಲನೇ ಅತ್ಯುತ್ತಮ ಚಿತ್ರ: ದೊಡ್ಡಹಟ್ಟಿ ಬೋರೇಗೌಡ

ಕೆಸಿಎನ್‌ ಗೌಡ ಪ್ರಶಸ್ತಿ (ನಿರ್ಮಾಪಕ): ಕೆ.ಎಂ.ಲೋಕೇಶ್

ಎಚ್ಎಲ್‌ಎನ್‌ ಸಿಂಹ ಪ್ರಶಸ್ತಿ (ನಿರ್ದೇಶಕ): ಕೆ.ಎಂ.ರಘು

2- ಎರಡನೇ ಅತ್ಯುತ್ತಮ ಚಿತ್ರ : 777 ಚಾರ್ಲಿ

ನಿರ್ಮಾಪಕ: ರಕ್ಷಿತ್‌ ಶೆಟ್ಟಿ

ನಿರ್ದೇಶಕ: ಕಿರಣ್‌ರಾಜ್‌

3- ಮೂರನೇ ಅತ್ಯುತ್ತಮ ಚಿತ್ರ: ಬಿಸಿಲು ಕುದುರೆ

ನಿರ್ಮಾಪಕ: ಹೃದಯ ಶಿವ (ಮೆಟಾಫರ್‌ ಮೀಡಿಯಾ ಹೌಸ್)

ನಿರ್ದೇಶಕ: ಹೃದಯ ಶಿವ

4- ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಭಾರತದ ಪ್ರಜೆಗಳಾದ ನಾವು

ನಿರ್ಮಾಪಕ: ಡಾ.ಕೃಷ್ಣಮೂರ್ತಿ ಚಮರಂ (ಜೈಭೀಮ್‌ ಪ್ರೊಡಕ್ಷನ್ಸ್‌ )

ನಿರ್ದೇಶಕ: ಡಾ.ಕೃಷ್ಣಮೂರ್ತಿ ಚಮರಂ

5- ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಯುವರತ್ನ

ನಿರ್ಮಾಪಕ: ವಿಜಯ್ ಕಿರಗಂದೂರ್ (ಹೊಂಬಾಳೆ ಫಿಲ್ಮ್ಸ್‌)

ನಿರ್ದೇಶಕ: ಸಂತೋಷ್‌ ಆನಂದ್ ರಾಮ್

6- ಅತ್ಯುತ್ತಮ ಮಕ್ಕಳ ಚಿತ್ರ : ಕೇಕ್‌

ನಿರ್ಮಾಪಕ: ಈಶ್ವರ್‌ ಕ್ರಿಯೇಷನ್ಸ್‌ (ಕೆ.ಐ. ಪರೀಕ್ಷಿತ್)

ನಿರ್ದೇಶಕ: ಕಿಶೋರ್‌ ಮೂಡಬಿದ್ರಿ

7- ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಬಡವ ರಾಸ್ಕಲ್

ನಿರ್ಮಾಪಕ: ಕೆ.ಎ.ಧನಂಜಯ (ಡಾಲಿ ಪಿಕ್ಚರ್ಸ್‌)

ನಿರ್ದೇಶಕ: ಎಚ್.ಶಂಕರ್‌ (ಶಂಕರ್‌ ಗುರು)

8- ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ನಾಡ ಪೆದ ಆಶಾ (ಕೊಡವ)

ನಿರ್ಮಾಪಕ: ಜಿ.ಸಿ.ಹರಿಣಿ (ವಿಕೆ3 ಪಿಚ್ಚರ್ಸ್‌)

ನಿರ್ದೇಶಕ: ಪ್ರಕಾಶ್ ಕಾರ್ಯಪ್ಪ

9- ಅತ್ಯುತ್ತಮ ನಟ: ರಕ್ಷಿತ್‌ ಶೆಟ್ಟಿ (ಚಿತ್ರ: 777 ಚಾರ್ಲಿ)

10 ಅತ್ಯುತ್ತಮ ನಟಿ : ಅರ್ಚನಾ ಜೋಯಿಸ್‌ (ಚಿತ್ರ: ಮ್ಯೂಟ್)

11- ಅತ್ಯುತ್ತಮ ಪೋಷಕ ನಟ: ಪ್ರಮೋದ್‌ (ಚಿತ್ರ: ರತ್ನನ್‌ ಪ್ರಪಂಚ)

12- ಅತ್ಯುತ್ತಮ ಪೋಷಕನಟಿ: ಉಮಾಶ್ರೀ (ರತ್ನನ್‌ ಪ್ರಪಂಚ)

13- ಅತ್ಯುತ್ತಮ ಕತೆ: ಮಂಜುನಾಥ್ ಮುನಿಯಪ್ಪ (ಚಿತ್ರ: 9 ಸುಳ್ಳು ಕಥೆಗಳು)

14- ಅತ್ಯುತ್ತಮ ಚಿತ್ರಕತೆ: ಕೆ.ಎಂ.ರಘು (ದೊಡ್ಡಹಟ್ಟಿ ಬೋರೇಗೌಡ)

15- ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ತಾಯಿ ಕಸ್ತೂರ್‌ ಗಾಂಧಿ)

16- ಅತ್ಯುತ್ತಮ ಛಾಯಾಗ್ರಹಣ : ಭುವನೇಶ್ ಪ್ರಭು (ಆಮ್ಚೆ ಸಂಸಾರ-ಕೊಂಕಣಿ)

17- ಅತ್ಯುತ್ತಮ ಸಂಗೀತ ನಿರ್ದೇಶನ: ಇಮ್ತಿಯಾಜ್‌ ಸುಲ್ತಾನ್‌ (ಬಿಸಿಲು ಕುದುರೆ)

18- ಅತ್ಯುತ್ತಮ ಸಂಕಲನ- ಪ್ರತೀಕ್‌ ಶೆಟ್ಟಿ (777 ಚಾರ್ಲಿ)

19- ಅತ್ಯುತ್ತಮ ಬಾಲನಟ: ಮಾಸ್ಟರ್‌ ಅತೀಶ್‌ ಶೆಟ್ಟಿ (ಕೇಕ್‌)

20- ಅತ್ಯುತ್ತಮ ಬಾಲನಟಿ: ಬೇಬಿ ಭೈರವಿ (ಭೈರವಿ)

21- ಅತ್ಯುತ್ತಮ ಕಲಾನಿರ್ದೇಶನ: ರವಿ ಸಂತೇಹಕ್ಲು (ಭಜರಂಗಿ-2)

22- ಅತ್ಯುತ್ತಮ ಗೀತರಚನೆ: ನಾಗಾರ್ಜುನ ಶರ್ಮಾ (777 ಚಾರ್ಲಿ)

23- ಅತ್ಯುತ್ತಮ ಹಿನ್ನೆಲೆ ಗಾಯಕ: ಅನೀಶ್‌ ಕೇಶವರಾವ್ (ಶ್ರೀ ಜಗನ್ನಾಥದಾಸರು)

24- ಅತ್ಯುತ್ತಮ ಹಿನ್ನೆಲೆ ಗಾಯಕಿ: ಸಹನಾ ಎಂ ಭಾರದ್ವಾಜ್‌ (ದಂಡಿ)

25- ತೀರ್ಪುಗಾರರ ವಿಶೇಷ ಪ್ರಶಸ್ತಿ:

ತೀರ್ಪುಗಾರರ ವಿಶೇಷ ಚಿತ್ರ: ಭೈರವಿ

ವಸ್ತ್ರವಿನ್ಯಾಸ: ಯೋಗಿ ಜಿ ರಾಜು (ಚಿತ್ರ: ಭಜರಂಗಿ-2)

ಪ್ರಸಾದನ: ಶಿವಕುಮಾರ್‌ (ಚಿತ್ರ: ತಾಯಿ ಕಸ್ತೂರ್‌ ಗಾಂಧಿ)

ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಎಸ್‌. ಶಿವಕುಮಾರ್‌ (ಚಿತ್ರ: ಪೊಗರು)