ಡಿ.23ರಂದು ಮಂಡ್ಯದಲ್ಲಿ ಕಾಟೇರ ಪ್ರೀ ರಿಲೀಸ್‌ ಈವೆಂಟ್‌

| Published : Dec 20 2023, 01:15 AM IST

ಸಾರಾಂಶ

ದರ್ಶನ್ ನಟನೆಯ ಕಾಟೇರ ಚಿತ್ರದ ಪ್ರಿ ರಿಲೀಸ್ ಈವೆಂಟ್ ರೈತ ದಿನದಂದು ಮಂಡ್ಯದಲ್ಲಿ ನಡೆಯಲಿದೆ.

ಕನ್ನಡಪ್ರಭ ಸಿನಿವಾರ್ತೆ

‘ಡಿ.23, ರೈತರ ದಿನದಂದು ಮಂಡ್ಯದಲ್ಲಿ ಕಾಟೇರ ಚಿತ್ರದ ರೈತರ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ. ಅಂದು ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ ನಡೆಯಲಿದೆ. ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ’ ಎಂದು ನಟ ದರ್ಶನ್‌ ಹೇಳಿದ್ದಾರೆ. ಮಂಡ್ಯದ ಬಾಯ್ಸ್‌ ಕಾಲೇಜ್ ಗ್ರೌಂಡ್‌ನಲ್ಲಿ ಡಿ.23ರ ಸಂಜೆ 5 ಗಂಟೆಯಿಂದ ಸಿನಿಮಾ ಬಿಡುಗಡೆ-ಪೂರ್ವ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡು ದಿನಗಳಲ್ಲಿ 16 ಮಿಲಿಯನ್‌ಗೂ ಅಧಿಕ ವೀಕ್ಷಣೆ ದಾಖಲಾಗಿದೆ. ತರುಣ್‌ ಕಿಶೋರ್‌ ಸುಧೀರ್‌ ನಿರ್ದೇಶನದ ಈ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿದ್ದಾರೆ. ಆರಾಧನಾ ಸಿನಿಮಾದ ನಾಯಕಿ. ವೈಜನಾಥ ಬಿರಾದಾರ್, ಶ್ರುತಿ, ಕುಮಾರ್ ಗೋವಿಂದ್ ತಾರಾಗಣದಲ್ಲಿದ್ದಾರೆ. ಈ ಸಿನಿಮಾ ಡಿ.29ಕ್ಕೆ ಬಿಡುಗಡೆಯಾಗಲಿದೆ.