ಸಾರಾಂಶ
ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರಕ್ಕೆ ರಾಮ್ ಲಕ್ಷ್ಮಣ್ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಹ ನಿರ್ದೇಶನಕ್ಕೆ ರಾಮ್ ಲಕ್ಷ್ಮಣ್ ಅವರದು ದೊಡ್ಡ ಹೆಸರು.
ಕನ್ನಡಪ್ರಭ ಸಿನಿವಾರ್ತೆ
ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರಕ್ಕೆ ರಾಮ್ ಲಕ್ಷ್ಮಣ್ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಹ ನಿರ್ದೇಶನಕ್ಕೆ ರಾಮ್ ಲಕ್ಷ್ಮಣ್ ಅವರದು ದೊಡ್ಡ ಹೆಸರು. ಸ್ಟಾರ್ ನಟರ ಚಿತ್ರಗಳ ಫೈಟ್ ಮಾಸ್ಟರ್‌ಗಳು ಎನಿಸಿಕೊಂಡಿರುವ ರಾಮ್ ಲಕ್ಷ್ಮಣ್ ಇದೀಗ ‘ಕೆಡಿ’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರದಲ್ಲಿ ರವಿಚಂದ್ರನ್, ರಮೇಶ್ ಅರವಿಂದ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.