ವೈರಲ್‌ ವಯ್ಯಾರಿ ಹಾಡಿಗೆ ಕಿರೀಟಿ- ಶ್ರೀಲೀಲಾ ಭರ್ಜರಿ ಡ್ಯಾನ್ಸ್‌

| N/A | Published : Jul 07 2025, 01:29 PM IST

Shrileela

ಸಾರಾಂಶ

ಕಿರೀಟಿ ಮತ್ತು ಶ್ರೀಲೀಲಾ ನಟನೆಯ ‘ಜೂನಿಯರ್‌’ ಸಿನಿಮಾದ ‘ವೈರಲ್‌ ವಯ್ಯಾರಿ’ ಹಾಡು ಬಿಡುಗಡೆಯಾಗಿದೆ. ಸದ್ಯ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಸಿನಿವಾರ್ತೆ :  ಕಿರೀಟಿ ಮತ್ತು ಶ್ರೀಲೀಲಾ ನಟನೆಯ ‘ಜೂನಿಯರ್‌’ ಸಿನಿಮಾದ ‘ವೈರಲ್‌ ವಯ್ಯಾರಿ’ ಹಾಡು ಬಿಡುಗಡೆಯಾಗಿದೆ. ಸದ್ಯ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆದಿತ್ಯ ಮ್ಯೂಸಿಕ್‌ ಕನ್ನಡ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಡ್ಯಾನ್ಸಿಂಗ್‌ ನಂಬರ್‌ ಬಿಡುಗಡೆಯಾಗಿದೆ. ಪವನ್‌ ಭಟ್‌ ಸಾಹಿತ್ಯವಿರುವ ಹಾಡಿಗೆ ದೇವಿಶ್ರೀ ಪ್ರಸಾದ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

‘ಜೂನಿಯರ್‌’ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಜಿನಿಲಿಯಾ ಡಿಸೋಜಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಈ ಚಿತ್ರ ಜುಲೈ 18ಕ್ಕೆ ‘ಜೂನಿಯರ್‌’ ಸಿನಿಮಾ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Read more Articles on