ಓವನ್‌ನಲ್ಲಿ ಕೇಕ್‌ ಜೊತೆ ಐಪ್ಯಾಡ್‌ ಬೇಯಿಸಿದ ಮಹಿಳೆ!

| Published : Feb 26 2024, 01:31 AM IST

ಓವನ್‌ನಲ್ಲಿ ಕೇಕ್‌ ಜೊತೆ ಐಪ್ಯಾಡ್‌ ಬೇಯಿಸಿದ ಮಹಿಳೆ!
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯೊಬ್ಬಳು ಆಕಸ್ಮಿಕವಾಗಿ ಓವೆನ್‌ವೊಂದರಲ್ಲಿ ಆ್ಯಪಲ್‌ ಐಪ್ಯಾಡ್‌ ಹಾಕಿ ಬೇಯಿಸಿದ ಪರಿಣಾಮ ಉಪಕರಣ ಸುಟ್ಟು ಕರಕಲಾದ ಘಟನೆ ಅಮೆರಿಕದಲ್ಲಿ ನಡೆದಿದೆ.

ನಾವೆಲ್ಲರೂ ತಿನ್ನುವ ಪದಾರ್ಥವನ್ನು ಓವನ್‌ನಲ್ಲಿ ಹಾಕಿ ಬೇಯಿಸಿಕೊಳ್ಳುತ್ತೇವೆ.

ಆದರೆ ಇಲ್ಲೊಬ್ಬ ಮಹಿಳೆ ಅಕಸ್ಮಾತಾಗಿ ಆ್ಯಪಲ್‌ ಐಪ್ಯಾಡ್‌ನನ್ನೇ ಓವನ್‌ ಒಳಗೆ ಹಾಕಿಬಿಟ್ಟಿದ್ದಾಳೆ.

ನಂತರ ಓವನ್‌ನಲ್ಲಿ ಆಕೆಯ ಆ್ಯಪಲ್‌ ಐಪ್ಯಾಡ್‌ ಸುಟ್ಟು ಕರಕಲಾಗಿದೆ.

ಆ ದೃಶ್ಯವನ್ನು ಅವರ ಪುತ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ಅದಕ್ಕೆ ನೆಟ್ಟಿಗರು ತರಹೇವಾಗಿ ಕಮೆಂಟ್‌ ಹಾಕಿದ್ದು, ಕೆಲವರು ಸದ್ಯ ಮಹಿಳೆ ತನ್ನ ಹಸ್ತವನ್ನೇ ಓವನ್‌ ಒಳಗೆ ಹಾಕಿ ಬೇಯಿಸಿಕೊಳ್ಳದ್ದಕ್ಕೆ ಸಮಾಧಾನ ಪಟ್ಟುಕೊಳ್ಳುವಂತೆ ವ್ಯಂಗ್ಯವಾಡಿದ್ದಾರೆ.

ಇನ್ನು ಕೆಲವರು ಸರಿಯಾಗಿ ಮಾಡಿದ್ದಾರೆ ಎಂದು ಟಾಂಗ್‌ ನೀಡಿದ್ದಾರೆ.