7 ಡಾಲರ್‌ ಬರ್ಗರ್‌ಗೆ ₹6 ಲಕ್ಷಟಿಪ್ಸ್‌ ಕೊಟ್ಟು ಬಂದ ಮಹಿಳೆ!

| Published : Nov 27 2023, 01:15 AM IST

7 ಡಾಲರ್‌ ಬರ್ಗರ್‌ಗೆ ₹6 ಲಕ್ಷಟಿಪ್ಸ್‌ ಕೊಟ್ಟು ಬಂದ ಮಹಿಳೆ!
Share this Article
  • FB
  • TW
  • Linkdin
  • Email

ಸಾರಾಂಶ

ಆದರೆ ಅಮೆರಿಕದ ಮಹಿಳೆಯೊಬ್ಬರು ಕ್ರೆಡಿಟ್‌ ಕಾರ್ಡಿನಲ್ಲಿ ಪಾವತಿ ಮಾಡಿದ್ದಾರೆ. ಅದೇ ಗುಂಗಿನಲ್ಲಿ ಪಾಯಿಂಟ್ಸ್‌ ಬರುತ್ತದೆ ಎಂದು ಮೊತ್ತದ ಜಾಗದಲ್ಲಿ ತನ್ನ ಫೋನ್ ನಂಬರಿನ ಕೊನೆ 6 ಡಿಜಿಟ್‌ ನಮೂದಿಸಿದ್ದಾರೆ. ಇದರ ಪರಿಣಾಮ 7 ಡಾಲರ್‌ ಬರ್ಗರ್‌ಗೆ 7000 ಡಾಲರ್‌ (6 ಲಕ್ಷ ರು) ಕ್ಷಣಾರ್ಧದಲ್ಲಿ ಹೋಗಿದೆ.

ಸಾಮಾನ್ಯವಾಗಿ ನಾವೆಲ್ಲ ಹೋಟೆಲಿಗೆ ಹೋದರೆ 100-200 ರು. ಟಿಪ್ಸ್‌ ಕೊಡುತ್ತೇವೆ. ಅದೂ ನಗದು ಮೂಲಕ ಕೊಡುತ್ತೇವೆ. ಆದರೆ ಅಮೆರಿಕದ ಮಹಿಳೆಯೊಬ್ಬರು ಕ್ರೆಡಿಟ್‌ ಕಾರ್ಡಿನಲ್ಲಿ ಪಾವತಿ ಮಾಡಿದ್ದಾರೆ. ಅದೇ ಗುಂಗಿನಲ್ಲಿ ಪಾಯಿಂಟ್ಸ್‌ ಬರುತ್ತದೆ ಎಂದು ಮೊತ್ತದ ಜಾಗದಲ್ಲಿ ತನ್ನ ಫೋನ್ ನಂಬರಿನ ಕೊನೆ 6 ಡಿಜಿಟ್‌ ನಮೂದಿಸಿದ್ದಾರೆ. ಇದರ ಪರಿಣಾಮ 7 ಡಾಲರ್‌ ಬರ್ಗರ್‌ಗೆ 7000 ಡಾಲರ್‌ (6 ಲಕ್ಷ ರು) ಕ್ಷಣಾರ್ಧದಲ್ಲಿ ಹೋಗಿದೆ. ಇದೆಲ್ಲ ಮುಗಿದ ಮೇಲೆ ಅರಿತ ಆಕೆ, ‘ಅಯ್ಯೋ ಭಗವಂತ, ಏನಾಯಿತು’ ಎಂದು ಬೊಬ್ಬೆ ಹೊಡೆದಿದ್ದಾರೆ. ಬ್ಯಾಂಕ್‌ ಬಳಿ, ಹೋಟೆಲ್‌ ಬಳಿ ವಿಚಾರಿಸಿದಾಗ ‘ನಮಗೆ ಗೊತ್ತಿಲ್ಲಮ್ಮ ಇದು ನಿಮ್ಮ ತಪ್ಪು’ ಎಂದು ತಿಂಗಳಾದ ಮೇಲೆ ಹಣ ಮರಳಿಸಿದ್ದಾರೆ. ಅದಕ್ಕೆ ಹೇಳುವುದು ಮಾಡುವ ಕೆಲಸದಲ್ಲಿ ಪ್ರಜ್ಞೆ ಇರಬೇಕೆಂದು.