ದುನಿಯಾ ವಿಜಯ್‌ ನಟನೆಯ, ಜಡೇಶ್ ಹಂಪಿ ನಿರ್ದೇಶನದ ‘ಲ್ಯಾಂಡ್‌ ಲಾರ್ಡ್‌’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಕುರಿತ ವಿವರ ಇಲ್ಲಿದೆ. ದುನಿಯಾ ವಿಜಯ್‌, ರಚಿತಾರಾಮ್‌, ರಾಜ್‌ ಬಿ ಶೆಟ್ಟಿ ನಟನೆಯ ಸಿನಿಮಾ

ದುನಿಯಾ ವಿಜಯ್‌ ನಟನೆಯ, ಜಡೇಶ್ ಹಂಪಿ ನಿರ್ದೇಶನದ ‘ಲ್ಯಾಂಡ್‌ ಲಾರ್ಡ್‌’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಕುರಿತ ವಿವರ ಇಲ್ಲಿದೆ.

- ಸಂವಿಧಾನದ ಸಮಾನತೆ ಎಲ್ಲರಿಗೂ ದೊರೆಯಲಿ ಎಂಬ ಆಶಯದಲ್ಲಿ ಮೂಡಿಬಂದಿರುವ ಸಿನಿಮಾ.

- ಹಳ್ಳಿಯ ಬಡ ರೈತನ ಕಥೆ ಸಿನಿಮಾದಲ್ಲಿದೆ. ಭೂಮಾಲೀಕರ ದೌರ್ಜನ್ಯಕ್ಕೆ ಒಳಗಾಗುವ ಕುಟುಂಬವೊಂದು ಅದನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸುವ ಬಗೆಯನ್ನು ನಿರ್ದೇಶಕ ಜಡೇಶ್‌ ಹಂಪಿ ನಿರೂಪಿಸಲು ಪ್ರಯತ್ನಿಸಿದ್ದಾರೆ.

- ಇದು ಆಳಿದವನ ಕಥೆಯಲ್ಲ, ಅಳಿದು ಉಳಿದವನ ಕಥೆ ಎಂಬ ಟ್ಯಾಗ್‌ಲೈನ್‌ನಲ್ಲಿ ಸಿನಿಮಾದ ಒನ್‌ಲೈನ್‌ ಇದೆ. 80ರ ದಶಕದ ಕಥೆ ಗ್ರಾಮೀಣ ಬದುಕು, ರೈತ ಬದುಕಿನ ಭಿನ್ನ ನೋಟಗಳು ಕಾಣಸಿಗುತ್ತವೆ.

- ರೈತನ ನೋವು, ಬವಣೆಯನ್ನು ಹೇಳುವ ಜೊತೆಗೆ ಸಂಬಂಧಗಳ ಮೇಲೂ ಗಮನಹರಿಸಲಾಗಿದೆ.

 ಗಂಡ ಹೆಂಡತಿ ಅನ್ಯೋನ್ಯತೆ, ಅಪ್ಪ ಮಗಳ ಪ್ರೀತಿಗೂ ಜಾಗವಿದೆ.

- ‘ಸಿನಿಮಾದಲ್ಲಿ ರಕ್ತಪಾತ, ಹಿಂಸೆಗಿಂತಲೂ ಫ್ಯಾಮಿಲಿಗೆ ಕನೆಕ್ಟ್‌ ಆಗುವ ಸಂಗತಿಗಳು ಅಧಿಕ ಇವೆ. ಕೊನೆಯ ಉಸಿರಿನತನಕ ನಿತ್ಯ ಒಂದಿಲ್ಲೊಂದು ಬಗೆಯ ಹೋರಾಟದಲ್ಲಿ ತೊಡಗಿಸಿಕೊಂಡೇ ಇರುವ ಪ್ರತಿಯೊಬ್ಬರಿಗೂ ಈ ಚಿತ್ರ ಕನೆಕ್ಟ್‌ ಆಗುತ್ತದೆ’ ಎಂದು ದುನಿಯಾ ವಿಜಯ್‌ ಹೇಳುತ್ತಾರೆ.

- ರಾಜ್‌ ಬಿ ಶೆಟ್ಟಿ ಅಹಂಕಾರಿ ಭೂಮಾಲೀಕನಾಗಿ ನೆಗೆಟಿವ್‌ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ದುನಿಯಾ ವಿಜಯ್‌ ಹಾಗೂ ರಚಿತಾ ರಾಮ್‌ ವಯಸ್ಸಾದ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲಬಾರಿಗೆ ಈ ಬಗೆಯ ಪಾತ್ರದಲ್ಲಿ ಇವರು ನಟಿಸಿದ್ದಾರೆ.

- ದುನಿಯಾ ವಿಜಯ್‌ ಪುತ್ರಿ ರಿತನ್ಯಾ ಹಾಗೂ ಡೇರ್‌ ಡೆವಿಲ್‌ ಮುಸ್ತಾಫಾ ಖ್ಯಾತಿಯ ಶಿಶಿರ್‌ ಬೈಕಾಡಿ ಯುವ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ.